ದಾವಣಗೆರೆ | ನಾಪತ್ತೆಯಾಗಿದ್ದ ಇಬ್ಬರು ಯುವಕರ ಮೃತದೇಹ ಕೆರೆಯಲ್ಲಿ ಪತ್ತೆ
Update: 2025-11-25 15:38 IST
ಚೇತನ್, ಮನು
ದಾವಣಗೆರೆ: ನಾಪತ್ತೆಯಾಗಿದ್ದ ಇಬ್ಬರು ಯುವಕರ ಮೃತದೇಹ ಕೆರೆಯಲ್ಲಿ ಪತ್ತೆಯಾದ ಘಟನೆ ನಗರದ ಕುಂದವಾಡದಲ್ಲಿ ನಡೆದಿದೆ.
ಮೃತರನ್ನು ಶಾಂತಿನಗರದ ಚೇತನ್ (22) ಮತ್ತು ಮನು (23) ಎಂದು ಗುರುತಿಸಲಾಗಿದೆ.
ಕಳೆದ ಎರಡು ದಿನಗಳಿಂದ ಯುವಕರು ನಾಪತ್ತೆಯಾಗಿದ್ದು, ಕುಟುಂಬಸ್ಥರು ವಿವಿಧಡೆ ಹುಡುಕಾಟ ನಡೆಸಿದರು. ಆದರೆ ಮಂಗಳವಾರ ಕುಂದವಾಡ ಕೆರೆಯಲ್ಲಿ ಇವರ ಮೃತದೇಹಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ವಿದ್ಯಾನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.