ಸಂಜೀವ ಸಾಲಿಯಾನ್
Update: 2026-07-29 21:33 IST
ಉಡುಪಿ, ಜು.29: ಪೆರ್ಡೂರು ಶ್ರೀಅನಂತಪದ್ಮನಾಭ ದೇವಳ ಬಳಿಯ ನಿವಾಸಿ, ಕಾರ್ಕಳ ಬೈಪಾಸ್ ರೋಡ್ ಕಾಬೆಟ್ಟುವಿನ ಗಿರಿರಾಜ್ ಚಿಕನ್ ಫಾರ್ಮ್‌ನ ಮಾಲಕ ಸಂಜೀವ ಕೆ.ಸಾಲಿಯಾನ್(72) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನರಾದರು.
ಸಂಜೀವ ಸಾಲಿಯಾನ್ ಕಾಬೆಟ್ಟುವಿನಲ್ಲಿ ಗಿರಿರಾಜ ಫಾರ್ಮ್ ಉದ್ಯಮವನ್ನು ಕಳೆದ 26ವರ್ಷಗಳಿಂದ ನಡೆಸುತ್ತಿ ದ್ದರು. ಉದ್ಯಮದ ಜತೆಗೆ ಸಮಾಜಮುಖಿ ಚಟುವಟಿಕೆಯಲ್ಲಿ ಸಕ್ರೀಯರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.