ಉದ್ಯಮಿ ಹುಸೈನ್ ಶಬೀರ್ ನಿಧನ

Update: 2026-07-17 15:13 IST

ಮಂಗಳೂರು : ಉದ್ಯಮಿ ಹಾಗೂ ಮುಬಾರಕ್ ಕುಟುಂಬದ ಸದಸ್ಯರಾದ ಹುಸೈನ್ ಶಬೀರ್ (66) ಅವರು ಶುಕ್ರವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ನಿಧನರಾದರು.

ಮರ್ಹೂಂ ಹಾಜಿ ಅಬ್ದುಲ್ ರಹಿಮಾನ್ ಅವರ ಪುತ್ರರಾಗಿದ್ದ ಹುಸೈನ್ ಶಬೀರ್ ಅವರು ಚಪ್ಪಲಿ ಉದ್ಯಮದಲ್ಲಿ ಹೆಸರುವಾಸಿಯಾಗಿದ್ದರು. ಅವರು ಪತ್ನಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಇಂದು ರಾತ್ರಿ ಮಂಗಳೂರಿನ ಬಂದರ್ ಕೇಂದ್ರ ಜುಮ್ಮಾ ಮಸೀದಿ ಆವರಣದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News