ನಿವೃತ್ತ ಶಿಕ್ಷಕಿ ಫೌಸ್ಟಿನ್ ಸುದಾನಾ ಫುರ್ಟಾಡೊ
ಮಂಗಳೂರು,ನ.26:ನಿವೃತ್ತ ಶಿಕ್ಷಕಿ, ಚರ್ಚ್ ಆಫ್ ಸೌತ್ ಇಂಡಿಯಾದ ಕರ್ನಾಟಕ ದಕ್ಷಿಣ ಸಭಾ ಪ್ರಾಂತದ ನಿವೃತ್ತ ಬಿಷಪ್ ಮಂಗಳೂರಿನ ರೆ.ಸಿ.ಎಲ್. ಫುರ್ಟಾಡೊರ ಪತ್ನಿ ಫೌಸ್ಟಿನ್ ಸುದಾನಾ ಫುರ್ಟಾಡೊ (84) ಮಂಗಳವಾರ ನಿಧನರಾದರು.
ಮೃತರು ಪತಿ ಬಿಷಪ್ ಸಿ.ಎಲ್. ಫುರ್ಟಾಡೊ, ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿಯನ್ನು ಆಗಲಿದ್ದಾರೆ.
ಫೌಸ್ಟಿನ್ ಸುದಾನಾ ಫುರ್ಟಾಡೊ ನಗರದ ಮಿಲಾಗ್ರಿಸ್ ಬಾಲಕರ ಶಾಲೆ ಮತ್ತು ಸೈಂಟ್ ಆಗ್ನೆಸ್ ಹೆಣ್ಮಕ್ಕಳ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿ, ತುಮಕೂರು ಯುನಿಟಿ ಹೈಸ್ಕೂಲಿನಲ್ಲಿ ಮುಖ್ಯ ಶಿಕ್ಷಕಿಯಾಗಿ, ನಗರದ ಬಲ್ಮಠ ಕರ್ನಾಟಕ ಥಿಯಾಲಜಿಕಲ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿ ಕರ್ತವ್ಯ ಸಲ್ಲಿಸಿದ್ದರು.
ನಗರದ ಕೆಟಿಸಿಯಲ್ಲಿರುವ ಮೊಗ್ಲಿಂಗ್ ಇನ್‌ಸ್ಟಿಟ್ಯೂಟ್ ಆಫ್ ಜರ್ಮನ್ ಲಾಂಗ್ವೇಜ್ ಸಂಸ್ಥೆಯ ಸ್ಥಾಪಕ ಪ್ರಾಂಶುಪಾಲೆ ಹಾಗೂ ಜರ್ಮನ್ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದ್ದರು.
ಕೆಟಿಸಿ ಮಂಗಳೂರು ಕೋಶಾಧಿಕಾರಿಯಾಗಿ, ಮಂಗಳೂರು ವಿಶ್ವ ವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ, ಸಿಎಸ್‌ಐ ಕರ್ನಾಟಕ ದಕ್ಷಿಣ ಸಭಾ ಪ್ರಾಂತದ ವಿಮನ್ಸ್ ಫೆಲೋಶಿಪ್ ಅಧ್ಯಕ್ಷರಾಗಿ, ವೈಎಂಸಿಎ ಮಂಗಳೂರು ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.