×
Ad

ಮುಂಬೈ: ವಿಜಯಲಕ್ಷ್ಮೀ ರಾವ್ ನಿಧನ

Update: 2025-11-24 17:42 IST

ಮುಂಬೈ: ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ ಇದರ ಸದಸ್ಯ, ಹಿರಿಯ ಪತ್ರಕರ್ತ ಶ್ರೀನಿವಾಸ ಜೋಕಟ್ಟೆಯವರ ಪತ್ನಿ ವಿಜಯಲಕ್ಷ್ಮೀ ಎಸ್. ರಾವ್ (55.) ಸೋಮವಾರ ಮುಂಜಾನೆ ಹೃದಯಾಘಾತದಿಂದ ಮುಂಬೈಯ ವಸಾಯಿ ಪೂರ್ವದ ಎವರ್ ಶೈನ್ ಸಿಟಿಯ ಅವೆನ್ಯೂ ಫೇಸ್-2ರಲ್ಲಿನ ಎವರ್ಶೈನ್ ತುಲಿಪ್ ನಿವಾಸದಲ್ಲಿ ನಿಧನರಾದರು.

ಮೂಲತಃ ಉಡುಪಿ ಜಿಲ್ಲೆಯ ಬ್ರಹ್ಮಾವರದವರಾಗಿರುವ ವಿಜಯಲಕ್ಷ್ಮೀಯವರು ಪತಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ವಿಜಯಲಕ್ಷ್ಮೀ ಅಕಾಲಿಕ ನಿಧನಕ್ಕೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಹಾರಾಷ್ಟ್ರ ಘಟಕವು ತೀವ್ರ ಸಂತಾಪ ವ್ಯಕ್ತಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News