ದೇಜಪ್ಪ ಕೋಟ್ಯಾನ್
Update: 2025-05-29 22:36 IST
ದೇಜಪ್ಪ ಕೋಟ್ಯಾನ್
ಉಡುಪಿ : ಅಂಬಲಪಾಡಿ ನಿವಾಸಿ ದೇಜಪ್ಪ ಕೋಟ್ಯಾನ್ (87) ಮೇ 29ರಂದು ವಯೋಸಹಜ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರಿ, ಮೂವರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಕಾರ್ಪೋರೇಶನ್ ಬ್ಯಾಂಕ್‌ನ (ಈಗಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ) ಮುಖ್ಯ ಪ್ರಬಂಧಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ದೇಜಪ್ಪ ಕೋಟ್ಯಾನ್ ಅವರು ಬಳಿಕ ಉಡುಪಿ ನ್ಯಾಯಾಲಯದಲ್ಲಿ ವಕೀಲ ವೃತ್ತಿಯನ್ನು ನಡೆಸುತಿದ್ದರು.