×
Ad

ಕರ್ನಾಟಕದ ಮಾಜಿ ಸಚಿವ ಎಸ್.ಎಂ. ಯಾಹ್ಯಾ ಅವರ ಪತ್ನಿ ನಿಧನ

Update: 2025-06-23 13:25 IST

ಬೆಂಗಳೂರು: ಕರ್ನಾಟಕ ಸರ್ಕಾರದ ಮಾಜಿ ಸಚಿವ ದಿವಂಗತ ಎಸ್.ಎಂ.ಯಹ್ಯಾ ಅವರ ಪತ್ನಿ ಶಾಬೀಬಿ ಸೋಮವಾರ ಬೆಂಗಳೂರಿನಲ್ಲಿ ನಿಧನರಾದರು.

ಬೆಂಗಳೂರಿನ ʼಭಟ್ಕಳ ಮುಸ್ಲಿಂ ಜಮಾತ್ʼ ಅಧ್ಯಕ್ಷ ಎಸ್.ಎಂ.ಅಫ್ತಾಬ್ ಅವರ ತಾಯಿಯಾಗಿರುವ ಶಾಬೀಬಿ ಅವರು ಇಬ್ಬರು ಗಂಡು ಮಕ್ಕಳು ಮತ್ತು ಅಮೆರಿಕದಲ್ಲಿ ವೈದ್ಯೆಯಾಗಿರುವ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.

ಕರ್ನಾಟಕದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಗಳಿಗಾಗಿ ದಿವಂಗತ ಎಸ್.ಎಂ.ಯಹ್ಯಾ ಅವರು ಸ್ಮರಣೀಯರಾಗಿದ್ದಾರೆ. ಯಹ್ಯಾ ಅವರು ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ, ಭಟ್ಕಳದಲ್ಲಿ ಅಂಜುಮನಾಬಾದ್‌ಗೆ ಭೂಮಿಯನ್ನು ಪಡೆಯುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು, ಸದ್ಯ ಇದು ಈ ಪ್ರದೇಶದಲ್ಲಿ ತಾಂತ್ರಿಕ ಶಿಕ್ಷಣದ ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News