ಹಮೀದ್ ಮಾಸ್ಟರ್
Update: 2025-06-22 18:47 IST
ಕಾಪು : ನಿವೃತ್ತ ಶಿಕ್ಷಕ ಪೊಲಿಪು ಗುಡ್ಡೆ ನಿವಾಸಿ ಹಮೀದ್ ಮಾಸ್ಟರ್(78) ಅಲ್ಪಕಾಲದ ಅಸೌಖ್ಯದಿಂದ ಜೂ.21ರಂದು ಸ್ವಗೃಹದಲ್ಲಿ ನಿಧನರಾದರು.
ಇವರು ಮೂಡುಬೆಳ್ಳೆ ಅನುದಾನಿತ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಪ್ರಾರಂಭಿಸಿದ್ದು, ಬಳಿಕ ಕೂಳೂರಿನ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಸ್ವಯಂ ನಿವೃತ್ತಿಯ ಬಳಿಕ ಅವರು ದಂಡತೀರ್ಥ ಹಾಗೂ ಕಾಪು ವಿದ್ಯಾನಿಕೇತನ ಕಾಲೇಜಿನಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದರು.
ಕಾಪು ಪೊಲಿಪು ಜಾಮಿಯಾ ಮಸೀದಿಯಲ್ಲಿ ದೀರ್ಘಕಾಲ ಪ್ರಧಾನ ಕಾರ್ಯದರ್ಶಿಯಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.