ಸುಭಾಷಿಣಿ ಕಾಮತ್
Update: 2025-07-09 22:31 IST
ಸುಳ್ಯ: ಜಯನಗರದ ಸುರೇಶ್ ಕಾಮತ್ ರವರ ಪತ್ನಿ ಸುಭಾಷಿಣಿ ಕಾಮತ್ (38) ರವರು ಅಸೌಖ್ಯದಿಂದ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ನಿಧನರಾದರು.
ಸುಭಾಷಿಣಿಯವರು ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಮೃತರಿಗೆ ಪತಿ, ತಾಯಿ, ಸಹೋದರ, ಸಹೋದರಿ ಇದ್ದಾರೆ.