ಎಂ.ರತ್ನಾಕರ ಶೆಟ್ಟಿ
Update: 2025-07-19 20:38 IST
ಉಡುಪಿ, ಜು.19: ಉಡುಪಿ ಅಂಬಾಗಿಲು ನಿವಾಸಿ, ವಿಜಯ ಬ್ಯಾಂಕಿನ ನಿವೃತ್ತ ಅಧಿಕಾರಿ ಎಂ. ರತ್ನಾಕರ ಶೆಟ್ಟಿ (77) ಅವರು ಇತ್ತೀಚೆಗೆ ಸ್ವಗೃಹದಲ್ಲಿ ನಿಧನ ಹೊಂದಿದರು. ಇವರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.
ವಿಜಯ ಬ್ಯಾಂಕ್‌ನ ಕೊರಂಗ್ರಪಾಡಿ, ಹುಣಸೂರು, ಅಸ್ಸಾಂ, ಉಡುಪಿ ಶಾಖೆಗಳಲ್ಲಿ ಸೇವೆ ಸಲ್ಲಿಸಿದ ಇವರು ನಿವೃತ್ತಿಯ ಬಳಿಕ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಕಲಾಪ್ರೇಮಿಯಾಗಿದ್ದ ರತ್ನಾಕರ ಶೆಟ್ಟಿ ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾಗಿದ್ದರು.