×
Ad

ಪ್ರಭಾಕರ ಶೆಟ್ಟಿ ಮೂಡುಗೋಪಾಡಿ

Update: 2025-05-28 23:58 IST

ಕುಂದಾಪುರ: ತಾಲೂಕಿನ ಪ್ರಸಿದ್ಧ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಮ್. ಪ್ರಭಾಕರ ಶೆಟ್ಟಿ (65) ಬುಧವಾರ ಸಂಜೆ ಹೃದಯಘಾತದಿಂದ ನಿಧನರಾದರು.

ಕೋಟೇಶ್ವರದ ರೋಟರಿ ಸಂಸ್ಥೆಯ ಸ್ಥಾಪಕ ಸದಸ್ಯರಾಗಿ ರೋಟರಿ ಅಸಿಸ್ಟೆಂಟ್ ಗವರ್ನರ್ ಆಗಿ ಸೇವೆ ಸಲ್ಲಿಸಿ ತಮ್ಮದೇ ಆದ ಸಾಮಾಜಿಕ ಸೇವೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಸತತ 2 ಅವಧಿಗೆ ಅಧ್ಯಕ್ಷರಾಗಿ ದೇವಳದಲ್ಲಿ ಧ್ವಜಮರ ಪ್ರತಿಷ್ಠೆ ಹಾಗೂ ಜೀರ್ಣೋದ್ಧಾರ ಕಾರ್ಯ ಸೇರಿದಂತೆ ಬಹುತೇಕ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದರು.

ಪ್ರಭಾಕರ ಶೆಟ್ಟಿ ಬೀಜಾಡಿ-ಗೋಪಾಡಿ ಗ್ರಾಪಂನ ಮಾಜಿ ಸದಸ್ಯರು. ಇವರು ತಾಯಿ, ಪತ್ನಿ, ಪುತ್ರ, ಪುತ್ರಿ ಹಾಗೂ ಸಹೋದರ- ಸಹೋದರಿಯರನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News