ಸಮಸ್ತ ಕೇಂದ್ರ ಮುಶಾವರ ಸದಸ್ಯ ಮಾಣಿಯೂರು ಅಹ್ಮದ್ ಮುಸ್ಲಿಯಾರ್ ನಿಧನ
Update: 2025-06-23 07:37 IST
ಕಣ್ಣೂರು: ಪ್ರಮುಖ ವಿದ್ವಾಂಸರೂ ಸಮಸ್ತ ಕೇರಳ ಜಂಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯರೂ ಆಗಿದ್ದ ಮಾಣಿಯೂರ್ ಅಹಮ್ಮದ್ ಮುಸ್ಲಿಯಾರ್ ನಿಧನರಾದರು
ಪುರತ್ತೀಲ್ ಪುದಿಯಗತ್ತ್ ಶೈಖ್ ಕುಟುಂಬದಲ್ಲಿ 1949 ಜೂನ್ 19 ರಂದು ಮಾಣಿಯೂರ್ ಅಬ್ದುಲ್ಲ ಮೌಲವಿ ಹಾಗೂ ಪುರತ್ತೀಲ್ ಪುದಿಯಗತ್ತ್ ಹಲೀಮ ದಂಪತಿಯ ಮಗನಾಗಿ ಮಾಣಿಯೂರ್ ಉಸ್ತಾದ್ ಜನಿಸಿದರು.
ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯ, ಸಮಸ್ತ ಕಣ್ಣೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ, ತೃಕರಿಪುರ ಮುನವ್ವಿರುಲ್ ಇಸ್ಲಾಂ ಅರೇಬಿಕ್ ಕಾಲೇಜು ಪ್ರಿನ್ಸಿಪಾಲ್ ಮುಂತಾದ ಹಲವಾರು ಸ್ಥಾನಗಳನ್ನು ಅವರು ವಹಿಸಿದ್ದರು.
ಮಾಣಿಯೂರು ಉಸ್ತಾದ್ ಅವರ ಜನಾಝ (ಪಾರ್ಥಿವ ಶರೀರ)ವನ್ನು ಬೆಳಿಗ್ಗೆ 9 ಗಂಟೆಯಿಂದ ಚೆರುವತ್ತಲ ಮನೆಯಲ್ಲಿ ಅಂತಿಮ ದರ್ಶನಕ್ಕಾಗಿ ಇಡಲಾಗುವುದು. ಮಧ್ಯಾಹ್ನ 2 ಗಂಟೆಯ ಬಳಿಕ ಸ್ವಗೃಹದ ಸಮೀಪದಲ್ಲೇ ದಫನ ಕಾರ್ಯ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.