×
Ad

ಉಪ್ಪಿನಂಗಡಿ: ಪದ್ಮನಾಭ ಆಚಾರ್ಯ ನಿಧನ

Update: 2024-02-22 13:20 IST

ಉಪ್ಪಿನಂಗಡಿ: ಇಲ್ಲಿನ ಗಾಂಧಿ ಪಾರ್ಕಿನಲ್ಲಿ ಕಮ್ಮಾರಿಕೆ ವೃತ್ತಿಯನ್ನು ಮಾಡುತ್ತಿದ್ದ, ಪುಳಿತ್ತಡಿ ನಿವಾಸಿ ಬಿ. ಪದ್ಮನಾಭ ಆಚಾರ್ಯ (76) ಬುಧವಾರ ರಾತ್ರಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಉಪ್ಪಿನಂಗಡಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಸ್ಥಾಪಕ ಸದಸ್ಯರು, ಪುತ್ತೂರು ತಾಲೂಕು ಕಮ್ಮಾರರ ಸಂಘದ ಸದಸ್ಯರು, ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಅಜೀವ ಸದಸ್ಯರಾಗಿದ್ದರು.  ಕಮ್ಮಾರಿಕೆ ವೃತ್ತಿಯಲ್ಲಿ ಉತ್ತಮ ಹೆಸರನ್ನು ಗಳಿಸುವ ಮೂಲಕ ರೈತಾಪಿ ವರ್ಗಕ್ಕೆ ತೀರಾ ಹತ್ತಿರವಾಗಿದ್ದ ಪದ್ಮನಾಭ ಅವರು, ಹಲವಾರು ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸಮಾಜದಲ್ಲಿಯೂ ಚಿರಪರಿಚಿತರಾಗಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News