×
Ad

ರಾಜ್ಯ ಸರಕಾರದಿಂದ ಕೇಂದ್ರದ ಮೇಲೆ ಗೂಬೆಕೂರಿಸುವ ಕೆಲಸ: ಕೋಟ ಶ್ರೀನಿವಾಸ ಪೂಜಾರಿ

Update: 2023-06-15 14:02 IST

ಫೋಟೋ: (facebook.com/ಕೋಟಶ್ರಿನಿವಾಸ್ ಬಿಜೆಪಿ)

ಉಡುಪಿ, ಜೂ.15: ಕೇಂದ್ರ ಸರಕಾರ ಕೊಡುವ ಉಚಿತ ಅಕ್ಕಿಯಲ್ಲಿ ಒಂದು ಗ್ರಾಂ ಕೂಡ ಕಡಿಮೆ ಮಾಡಿಲ್ಲ. ರಾಜ್ಯ ಕೇಳಿರುವ 10 ಕೆಜಿ ಅಕ್ಕಿಯನ್ನು ಉಚಿತ ಓಪನ್ ಟೆಂಡರ್ನಲ್ಲಿ ಕೊಡುವುದಾಗಿ ಕೇಂದ್ರ ಹೇಳಿದೆ. ತಮ್ಮ ವೈಫಲ್ಯ ಮುಚ್ಚಲು ಕೇಂದ್ರ ಸರಕಾರದ ಮೇಲೆ ಗೂಬೆಕೂರಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಆತ್ಮ ವಂಚನೆಯ ಮಾತುಗಳನ್ನಾಡುತ್ತಿದ್ದಾರೆ. ಕೇಂದ್ರ ಸರಕಾರ ಉಚಿತವಾಗಿ ಐದು ಕಿಲೋ ಅಕ್ಕಿ ವಿತರಣೆ ಮಾಡುತ್ತಿದೆ. ಹಿಂದೆ ಒಂದು ಕೆಜಿಗೆ 29 ರೂ. ಕೇಂದ್ರ ಮತ್ತು 3ರೂ. ರಾಜ್ಯ ಸರಕಾರ ನೀಡಬೇಕಿತ್ತು. ಆದರೆ ಈಗ ಮೋದಿ ಸರಕಾರ ಸಂಪೂರ್ಣವಾಗಿ ಐದು ಕೆಜಿ ಅಕ್ಕಿ ಉಚಿತವಾಗಿ ಕೊಡುತ್ತಿದೆ ಎಂದರು.

ಕಾಂಗ್ರೆಸ್ ಪ್ರಣಾಳಿಕೆ ಮತ್ತು ಭಾಷಣದಲ್ಲಿ 10ಕೆಜಿ ಎಂದು ಘೋಷಿಸಿದೆ. ಸಿದ್ದರಾಮಯ್ಯ ಸತ್ಯಕ್ಕೆ ಅಪಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರ ಮುಂದೆ ಸತ್ಯ ಹೇಳಬೇಕು. ಕೇಂದ್ರದ ಐದು ಕೆಜಿ ಅಕ್ಕಿ ಬಿಟ್ಟು, ರಾಜ್ಯ ಸರಕಾರ 10 ಕೆಜಿ ಅಕ್ಕಿ ಕೊಡಬೇಕು. ಆ ಮೂಲಕ ಚುನಾವಣೆಗೆ ಮುಂಚಿತವಾಗಿ ಕೊಟ್ಟ ಭರವಸೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News