×
Ad

ಗದಗ | ಉಕ್ಕಿ ಹರಿಯುತ್ತಿರುವ ಬೆಣ್ಣೆ ಹಳ್ಳ : ಸಂಪರ್ಕ ರಸ್ತೆ ಸಂಪೂರ್ಣ ಜಲಾವೃತ

Update: 2025-06-12 10:51 IST

ಗದಗ : ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮವಾಗಿ ಗದಗ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ ಗ್ರಾಮದ ಬಳಿ ಹರಿಯುವ ಬೆಣ್ಣೆ ಹಳ್ಳ ಉಕ್ಕಿ ಹರಿಯುತ್ತಿದೆ. ಹಳ್ಳದ ನೀರು ಸೇತುವೆ ಮೇಲೆ ಹರಿದು, ಸಂಪರ್ಕ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿದೆ.

ನರಗುಂದ-ರೋಣ ನಡುವಿನ ಸಂಚಾರಕ್ಕೆ ಈ ಪರಿಣಾಮದಿಂದ ತಾತ್ಕಾಲಿಕ ತೊಂದರೆ ಉಂಟಾಗಿದೆ. ಇದರಿಂದ ಈ ಮಾರ್ಗದ ಹಾದಿಯಲ್ಲಿ ಸಾಗುವ ವಾಹನಗಳು ಸ್ಥಗಿತಗೊಂಡಿವೆ. ಜನಜೀವನದಲ್ಲಿ ಅಸ್ತವ್ಯಸ್ತತೆ ಉಂಟಾಗಿದೆ.

ಹಳ್ಳದ ನೀರಿನ ಮಟ್ಟ ಅಪಾಯದ ಗಡಿದಾಟಿ ಹರಿಯುತ್ತಿರುವ ಹಿನ್ನೆಲೆಯಲ್ಲಿ, ಹಳ್ಳದ ತಟದ ಗ್ರಾಮಗಳು ಪ್ರವಾಹದ ಭೀತಿಯಲ್ಲಿ ತತ್ತರಿಸುತ್ತಿವೆ. ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ, ಬೆಣ್ಣೆ ಹಳ್ಳದ ಸುತ್ತಮುತ್ತಲಿನ ಗ್ರಾಮಗಳಿಗೆ ‘ಹೈ ಅಲರ್ಟ್’ ಘೋಷಿಸಿದೆ. ಸಾರ್ವಜನಿಕರಿಗೆ ಹಳ್ಳದ ಸಮೀಪಕ್ಕೆ ಹೋಗದಂತೆ ಸೂಚನೆ ನೀಡಲಾಗಿದೆ.

ಮಳೆ ಅವಧಿ ಮುಗಿಯುವವರೆಗೆ ಜನರಿಗೆ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳು ಕರೆ ನೀಡಿದ್ದಾರೆ. ಅಗತ್ಯವಾದ ಎಲ್ಲ ತುರ್ತು ಸೇವೆಗಳನ್ನು ಒದಗಿಸಲು ಜಿಲ್ಲಾಡಳಿತ ಸಹ ಸಜ್ಜಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News