ಜಿಲ್ಲಾ ಚೆನ್ನದಾಸರ ಸಮಾಜದಿಂದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ
ಗದಗ : ಗದಗ ಜಿಲ್ಲಾ ಚೆನ್ನದಾಸರ ಸಮಾಜದಿಂದ 2025 ನೇ ಸಾಲಿನಲ್ಲಿ 60% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಚೆನ್ನದಾಸರ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಜುಲೈ 13 ರಂದು ಗದಗ ನಗರದ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಚೆನ್ನದಾಸರ ಸಮಾಜದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮದ ಅಧ್ಯಕ್ಷ ಮಂಜು ಹೆಬ್ಬಳ್ಳಿ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ರು.
ಮಲ್ಲಸಮುದ್ರದ ಓಂಕಾರೇಶ್ವರಗಿರಿ ಶ್ರೀ ಫಕೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸುವರು, ಸಚಿವ ಡಾ. ಎಚ್ ಕೆ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದು ಚೆನ್ನದಾಸರ ಸಮಾಜಬಾಂಧವರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ರು. ಸಚಿವ ಎಚ್ ಕೆ ಪಾಟೀಲ್ ಅವರಿಗೆ ಚೆನ್ನದಾಸರ ಸಮಾಜಕ್ಕಾಗಿ ಒಂದು ಸಮುದಾಯ ಭವನ ನಿರ್ಮಾಣ ಮಾಡಿಕೊಡಬೇಕೆಂದು ಇದೇ ವೇಳೆ ಮನವಿ ಮಾಡಿದ್ರು.
ಸುದ್ದಿಗೋಷ್ಠಿಯಲ್ಲಿ ಪ್ರಲ್ಹಾದ್ ದಾಸರ, ಟಿ ಎಂ ದಂಡಗಿ, ಮಾರುತಿ ದಂಡಗಿದಾಸರ, ರಾಕೇಶ ದಾಸರಿ, ಕೃಷ್ಣ ದಾಸರ, ರವಿ ಹೆಬ್ಬಳ್ಳಿ, ಮೋಹನ ರತ್ನಾಕರ ಸೇರಿದಂತೆ ಇತರರು ಇದ್ದರು.