ಹಾಸನ | ಕೋಳಿ ತುಂಬಿದ್ದ ಪಿಕಪ್ ಪಲ್ಟಿ ; ನೂರಾರು ಕೋಳಿಗಳು ಸಾವು

Update: 2024-04-13 12:46 GMT

ಅರೇಹಳ್ಳಿ : ಎದುರಿಗೆ ಬರುತ್ತಿದ್ದ ವಾಹನಕ್ಕೆ ಸ್ಥಳಾವಕಾಶ ಮಾಡಿಕೊಡಲು ಹೋಗಿ ಬ್ರೇಕ್ ಪೈಪ್ ತುಂಡಾದ ಪರಿಣಾಮ ಕೋಳಿ ತುಂಬಿದ್ದ ವಾಹನವೊಂದು ಪಲ್ಟಿಯಾದ ಘಟನೆಯು ಬೇಲೂರು ತಾಲೂಕಿನ ಅರೇಹಳ್ಳಿ ಚರ್ಚ್ ಬಳಿಯ ಕೊನೆ ತಿರುವಿನಲ್ಲಿ ಶನಿವಾರ ಮುಂಜಾನೆ ನಡೆದಿದೆ.

ಬೇಲೂರಿನಿಂದ ಕೋಳಿ ತುಂಬಿಸಿಕೊಂಡು ಅರೇಹಳ್ಳಿ ಮಾರ್ಗವಾಗಿ ಪುತ್ತೂರಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಬಾಕ್ಸ್‌ ನಲ್ಲಿದ್ದ ನೂರಾರು ಕೋಳಿಗಳು ಮೃತಪಟ್ಟಿವೆ. ಚಾಲಕ ಹಾಗೂ ಇನ್ನೊಬ್ಬ ವ್ಯಕ್ತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News