×
Ad

ಹಾಸನ | ತಂದೆಯಿಂದ ಮಗನ ಕೊಲೆ

Update: 2023-08-24 10:55 IST

ಕೊಲೆ ಆರೋಪಿ ನಂಜುಂಡೇಗೌಡ

ಹಾಸನ, ಆ.24: ಮದ್ಯಪಾನ ಮಾಡಿ ದಿನನಿತ್ಯ ಮನೆಯಲ್ಲಿ ಜಗಳವಾಡುತ್ತಿದ್ದ ಮಗನನ್ನು ತಂದೆಯೇ ಹೊಡೆದು ಕೊಲೆಗೈದ , ಹೊಳೆನರಸೀಪುರ ತಾಲೂಕಿನ ಮಾವನೂರು ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿರುವುದು ವರದಿಯಾಗಿದೆ.

ಮೃತರನ್ನು ಮಾವನೂರು ಉಮೇಶ್ (35) ಎಂದು ಗುರುತಿಸಲಾಗಿದೆ. ಈತನ ತಂದೆ ನಂಜುಂಡೇಗೌಡ ಕೊಲೆ ಆರೋಪಿಯಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಮೇಶ್ ಮದ್ಯವ್ಯಸನಿಯಾಗಿದ್ದು, ಪ್ರತಿನಿತ್ಯ ಕುಡಿದು ಬಂದು ಮದುವೆ ಮಾಡುವಂತೆ, ಆಸ್ತಿಯನ್ನು ನೀಡುವಂತೆ ತಂದೆಯೊಂದಿಗೆ ಜಗಳವಾಡುತ್ತಿದ್ದನೆನ್ನಲಾಗಿದೆ. ಅದೇ ರೀತಿ ನಿನ್ನೆ ಸಂಜೆ ನಂಜುಂಡೇಗೌಡ ಕೊಟ್ಟಿಗೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕುಡಿದು ಬಂದ ಉಮೇಶ್ ತಂದೆಯೊಂದಿಗೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ತಂದೆಯ ಮೇಲೆ ಉಮೇಶ್ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ನಂಜುಂಡೇಗೌಡ ಚಾರ್ಜೆಬಲ್ ಬ್ಯಾಟರಿಯಿಂದ ಉಮೇಶ್ ತಲೆಗೆ ಬಲವಾಗಿ ಹೊಡೆದು ಅಲ್ಲಿಂದ ಪರಾರಿಯಾಗಿದ್ದಾರೆನ್ನಲಾಗಿದೆ.

ಗಂಭೀರ ಗಾಯಗೊಂಡಿದ್ದ ಉಮೇಶ್ ರನ್ನು ಗಮನಿಸಿದ ಅವರ ಸ್ನೇಹಿತರು ಕೂಡಲೇ ಆಸ್ಪತ್ರೆಗೆ ಸಾಗಿಸಿದರಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಈ ಬಗ್ಗೆ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News