×
Ad

ಏಮ್ಸ್ ಆಸ್ಪತ್ರೆಗಳಲ್ಲಿ ನರ್ಸಿಂಗ್ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ

Update: 2026-02-26 16:40 IST

Photo Credit : aiimsexams.ac.in

ಅಭ್ಯರ್ಥಿಗಳು ಬಿ.ಎಸ್ಸಿ. ನರ್ಸಿಂಗ್ ಅಥವಾ ಜನರಲ್ ನರ್ಸಿಂಗ್ & ಮಿಡ್‌ವೈಫರಿಯಲ್ಲಿ ಡಿಪ್ಲೊಮಾ ಹೊಂದಿರಬೇಕು ಮತ್ತು 50 ಹಾಸಿಗೆಗಳ ಆಸ್ಪತ್ರೆಯಲ್ಲಿ 2 ವರ್ಷಗಳ ಅನುಭವ ಮತ್ತು ರಾಜ್ಯ/ನರ್ಸಿಂಗ್ ಕೌನ್ಸಿಲ್‌ನಲ್ಲಿ ನೋಂದಣಿ ಹೊಂದಿರಬೇಕು.

ಹೊಸದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ (AIIMS) ಆಸ್ಪತ್ರೆ, ನರ್ಸಿಂಗ್ ಆಫೀಸರ್ NORCET 10 ನೇ ಹಂತದ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. 2551 ಹುದ್ದೆಗಳಿಗೆ ನೇಮಕಾತಿ ಆಗುತ್ತಿದೆ. AIIMS ಅರ್ಜಿ ನಮೂನೆಯು 2026 ಫೆಬ್ರವರಿ 24 ರಂದು ಪ್ರಾರಂಭವಾಗಿದೆ ಮತ್ತು ಅಭ್ಯರ್ಥಿಗಳು 2026 ಮಾರ್ಚ್ 16ರವರೆಗೆ ಅರ್ಜಿ ಸಲ್ಲಿಸಬಹುದು. ಅಗತ್ಯವಿರುವ ಕನಿಷ್ಠ ವಯಸ್ಸು 18 ವರ್ಷ ಗಳು ಮತ್ತು ಗರಿಷ್ಠ ವಯಸ್ಸು 2026 ಮಾರ್ಚ್ 16 ರಂತೆ 30 ವರ್ಷಗಳು. ಆಸಕ್ತ ಅಭ್ಯರ್ಥಿಗಳು ಈ ಮುಂದಿನ ಲಿಂಕ್ ನಲ್ಲಿ ವಿವರಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಬಹುದು: https://www.aiimsexams.ac.in/landingpage/courses/advertisement/66ab7926ebb3815a4b707804

📌 ಪ್ರಮುಖ ದಿನಾಂಕಗಳು

* ಆನ್ಲೈನ್ ಅರ್ಜಿ ಆರಂಭ: 24 ಫೆಬ್ರವರಿ 2026

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16 ಮಾರ್ಚ್ 2026

* ಪರೀಕ್ಷೆ ದಿನಾಂಕ: 2026 ಏಪ್ರಿಲ್ 11

* ಅಡ್ಮಿಟ್ ಕಾರ್ಡ್: ಪರೀಕ್ಷೆಗೆ ಮೊದಲು

* ಫಲಿತಾಂಶ ಘೋಷಣೆ ದಿನಾಂಕ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು

* ವಿವರಗಳನ್ನು ಈ ಮುಂದಿನ ಅಧಿಕೃತ ವೆಬ್ತಾಣದ ಲಿಂಕ್ನಲ್ಲಿ ಪರಿಶೀಲಿಸಬಹುದು: https://www.aiimsexams.ac.in/landingpage/courses/68dbbb27b7b096817673976e

📌 ಅರ್ಜಿ ಶುಲ್ಕ

ಸಾಮಾನ್ಯ, ಒಬಿಸಿಗೆ: 3000 ರೂ.

ಎಸ್/ಎಸ್ಟಿ/ಇಡಬ್ಲ್ಯುಎಸ್ಗೆ: 2400 ರೂ.

ಅಂಗವಿಕಲರಿಗೆ: ಶುಲ್ಕವಿಲ್ಲ.

ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ನಗದು ಕಾರ್ಡ್ / ಮೊಬೈಲ್ ವ್ಯಾಲೆಟ್ ಮೂಲಕ ಪಾವತಿಸಬಹುದು.

📌 ವಯೋಮಿತಿ

ಏಮ್ಸ್ ನೇಮಕಾತಿ 2026ರ ನಿಯಮದ ಪ್ರಕಾರ ವಯಸ್ಸಿನ ಮಿತಿ 2026 ಮಾರ್ಚ್ 16ರಂತೆ ಈ ಕೆಳಗಿನಂತಿರಬೇಕು.

ಕನಿಷ್ಠ ವಯಸ್ಸು: 18 ವರ್ಷಗಳು

ಗರಿಷ್ಠ ವಯಸ್ಸು:30 ವರ್ಷಗಳು

ಏಮ್ಸ್ ನೇಮಕಾತಿಗೆ ಅನುಗುಣವಾಗಿ ವಯಸ್ಸಿನ ಸಡಿಲಿಕೆ ಇರುತ್ತದೆ.

📌 ಒಟ್ಟು ಹುದ್ದೆಗಳು

2551 ಹುದ್ದೆಗಳಿಗೆ ನೇಮಕಾತಿ ಮಾಡಲಾಗುವುದು

📌 ಹುದ್ದೆಯ ಹೆಸರು ಮತ್ತು ಅರ್ಹತೆ

ಏಮ್ಸ್ ಸಂಸ್ಥೆಗಳಾದ್ಯಂತ ನರ್ಸಿಂಗ್ ಅಧಿಕಾರಿಗಳ ಹುದ್ದೆಗಳಿಗೆ (ಗ್ರೂಪ್ ಬಿ, ಲೆವೆಲ್ 07) ನೇಮಕಾತಿ. ಶೇ 80ರಷ್ಟು ಸೀಟುಗಳನ್ನು ಮಹಿಳೆಯರಿಗೆ ಮತ್ತು ಶೇ 20ರಷ್ಟು ಪುರುಷರಿಗೆ ಮೀಸಲಾಗಿದೆ.

ನರ್ಸಿಂಗ್ ಅಧಿಕಾರಿ ಏಮ್ಸ್: ಅಭ್ಯರ್ಥಿಗಳು ಬಿ.ಎಸ್ಸಿ. ನರ್ಸಿಂಗ್ ಅಥವಾ ಜನರಲ್ ನರ್ಸಿಂಗ್ & ಮಿಡ್‌ವೈಫರಿಯಲ್ಲಿ ಡಿಪ್ಲೊಮಾ ಹೊಂದಿರಬೇಕು ಮತ್ತು 50 ಹಾಸಿಗೆಗಳ ಆಸ್ಪತ್ರೆಯಲ್ಲಿ 2 ವರ್ಷಗಳ ಅನುಭವ ಮತ್ತು ರಾಜ್ಯ/ನರ್ಸಿಂಗ್ ಕೌನ್ಸಿಲ್‌ನಲ್ಲಿ ನೋಂದಣಿ ಹೊಂದಿರಬೇಕು. ಪೂರ್ಣ ವಿವರಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ.

ಆಯ್ಕೆ ಪ್ರಕ್ರಿಯೆ:

📌 ಎರಡು ಹಂತದ ಸಿಬಿಟಿ ಪರೀಕ್ಷೆ: ಪ್ರಾಥಮಿಕ ಪರೀಕ್ಷೆ 2026 ಏಪ್ರಿಲ್ 11 ಮತ್ತು ಮೈನ್ಸ್ 2026 ಎಪ್ರಿಲ್ 30

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News