10ನೇ ತರಗತಿ, ಪಿಯುಸಿ ಪಾಸಾದವರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಉದ್ಯೋಗವಕಾಶ
ಸಾಂದರ್ಭಿಕ ಚಿತ್ರ
ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ ಮತ್ತು ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವೂ ಇರುವುದಿಲ್ಲ. ಆದರೆ, ಮಹಿಳಾ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಲಬುರಗಿ ಜಿಲ್ಲೆಯಾದ್ಯಂತ ಖಾಲಿ ಇರುವ ಬರೋಬ್ಬರಿ 412 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಮುಂದಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು: https://karnemakaone.kar.nic.in/abcd/ApplicationForm_JA_org.aspx
ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ ಮತ್ತು ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವೂ ಇರುವುದಿಲ್ಲ. ಆದರೆ, ಮಹಿಳಾ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಹತ್ತನೇ ತರಗತಿ ಮತ್ತು ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಬಹುದು.
📌 ಪ್ರಮುಖ ದಿನಾಂಕಗಳು
* ಆನ್‌ಲೈನ್ ಅರ್ಜಿ ಆರಂಭ: 20 ಫೆಬ್ರವರಿ 2026
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16 ಮಾರ್ಚ್ 2026 (ಸಂಜೆ 5.30ರೊಳಗೆ)
📌 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಲಬುರಗಿ
ಉದ್ಯೋಗ ಸ್ಥಳ: ಕಲಬುರಗಿ ಜಿಲ್ಲೆ, ಕರ್ನಾಟಕ
ಹುದ್ದೆಯ ಹೆಸರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು
📌 ಹುದ್ದೆಗಳ ವಿವರ: ವಿವಿಧ ತಾಲೂಕುಗಳಲ್ಲಿ ಖಾಲಿ ಇರುವ ಹುದ್ದೆಗಳ ಹಂಚಿಕೆ ಹೀಗಿದೆ,
ಅಫಜಲಪುರ: ಕಾರ್ಯಕರ್ತೆ 6, ಸಹಾಯki 35
ಆಳಂದ: ಕಾರ್ಯಕರ್ತೆ 20, ಸಹಾಯಕಿ 68
ಚಿಂಚೋಳಿ: ಕಾರ್ಯಕರ್ತೆ 10, ಸಹಾಯಕಿ 39
ಚಿತ್ತಾಪುರ: ಕಾರ್ಯಕರ್ತೆ 05, ಸಹಾಯಕಿ 29
ಜೇವರ್ಗಿ: ಕಾರ್ಯಕರ್ತೆ 19, ಸಹಾಯಕಿ 25
ಕಲಬುರಗಿ ಗ್ರಾಮೀಣ: ಕಾರ್ಯಕರ್ತೆ 13, ಸಹಾಯಕಿ 56
ಕಲಬುರಗಿ ನಗರ: ಕಾರ್ಯಕರ್ತೆ 0, ಸಹಾಯಕಿ 11
ಸೇಡಂ: ಕಾರ್ಯಕರ್ತೆ 04, ಸಹಾಯಕಿ 21
ಶಹಾಬಾದ್: ಕಾರ್ಯಕರ್ತೆ 12, ಸಹಾಯಕಿ 39
📌 ಹುದ್ದೆಗಳು ಮತ್ತು ಶೈಕ್ಷಣಿಕ ಅರ್ಹತೆ
* ಅಂಗನವಾಡಿ ಕಾರ್ಯಕರ್ತೆಯರು: ಪಿಯುಸಿ ತೇರ್ಗಡೆಯಾಗಬೇಕು.
* ಅಂಗನವಾಡಿ ಸಹಾಯಕಿಯರು: 10ನೇ ತರಗತಿ ತೇರ್ಗಡೆಯಾಗಬೇಕು
📌 ವೇತನ ಶ್ರೇಣಿ
ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ನಿಗದಿತ ಮಾಸಿಕ ಗೌರವ ಧನವನ್ನು ನೀಡುತ್ತಾರೆ.
📌 ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಠ 19 ವರ್ಷಗಳು ತುಂಬಿರಬೇಕು ಮತ್ತು ಗರಿಷ್ಠ 35 ವರ್ಷಗಳ ಒಳಗಿರಬೇಕು. ಸರ್ಕಾರದ ನಿಯಮಗಳಂತೆ ವಯೋಮಿತಿ ಇರುತ್ತದೆ. ವಿಕಲಚೇತನ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ ನೀಡಲಾಗಿದೆ.