×
Ad

ಪಶ್ಚಿಮ ರೈಲ್ವೆಯಲ್ಲಿ ಅಪ್ರೆಂಟಿಸ್ ನೇಮಕಾತಿಗೆ ಅರ್ಜಿ ಆಹ್ವಾನ; ಯಾರು ಅರ್ಜಿ ಸಲ್ಲಿಸಬಹುದು?

Update: 2026-02-23 15:55 IST

Photo Credit : PTI 

ನೇಮಕಾತಿಯು ವಿವಿಧ ವರ್ಗಗಳಲ್ಲಿ ಒಟ್ಟು 5349 ಅಪ್ರೆಂಟಿಸ್ ಹುದ್ದೆಗಳನ್ನು ಹೊಂದಿದ್ದು, 2026 ಫೆಬ್ರವರಿ 21ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ.

ಮುಂಬೈನ ಪಶ್ಚಿಮ ರೈಲ್ವೆಯ ಸೆಲ್ (ಆರ್ಆರ್ಸಿ) ಜಾಹೀರಾತು ಸಂಖ್ಯೆ RRC/WR/04/2025 ಅಡಿಯಲ್ಲಿ ಅಪ್ರೆಂಟಿಸ್ ನೇಮಕಾತಿಯನ್ನು ಅಧಿಕೃತವಾಗಿ ಘೋಷಿಸಿದೆ. ನೇಮಕಾತಿಯು ವಿವಿಧ ವರ್ಗಗಳಲ್ಲಿ ಒಟ್ಟು 5349 ಅಪ್ರೆಂಟಿಸ್ ಹುದ್ದೆಗಳನ್ನು ಹೊಂದಿರುತ್ತದೆ. ಈ ನೇಮಕಾತಿಯು 2026 ಫೆಬ್ರವರಿ 21ರಂದು ಪ್ರಾರಂಭವಾಗಿದೆ. ಅಭ್ಯರ್ಥಿಗಳು 2026 ಮಾರ್ಚ್ 23ರವರೆಗೆ ಅರ್ಜಿ ಸಲ್ಲಿಸಬಹುದು. ಅಗತ್ಯವಿರುವ ಕನಿಷ್ಠ ವಯಸ್ಸು 15 ವರ್ಷಗಳು ಮತ್ತು ಗರಿಷ್ಠ ವಯಸ್ಸು 2026 ಮಾರ್ಚ್ 23ರಂತೆ 24 ವರ್ಷಗಳು. ಆಸಕ್ತ ಅಭ್ಯರ್ಥಿಗಳು ಈ ಮುಂದಿನ ಲಿಂಕ್ನಲ್ಲಿ ಅರ್ಜಿ ಸಲ್ಲಿಸಬಹುದು: https://rrc-wr.com/TradeApp/Registration/Index

📌 ಪ್ರಮುಖ ದಿನಾಂಕಗಳು

* ಅಧಿಸೂಚನೆ ದಿನಾಂಕ: 21 ಫೆಬ್ರವರಿ 2026

* ಆನ್ಲೈನ್ ಅರ್ಜಿ ಆರಂಭ: 21 ಫೆಬ್ರವರಿ 2026

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23 ಮಾರ್ಚ್ 2026

* ಶುಲ್ಕ ಪಾವತಿಗೆ ಕೊನೆಯ ದಿನಾಂಕ: 23 ಮಾರ್ಚ್ 2026

* ಮೆರಿಟ್ ಪಟ್ಟಿ: ನಂತರ ಸೂಚನೆ ನೀಡಲಾಗುವುದು

📌 ಅರ್ಜಿ ಶುಲ್ಕ

►  ಜನರಲ್/ ಒಬಿಸಿ/ ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ: 100 ರೂ.

 ಎಸ್ಸಿ/ಎಸ್ಟಿ/ಪಿಡಬ್ಲ್ಯುಬಿಡಿ, ಮಹಿಳಾ ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ

 ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವಾಲೆಟ್ ಮೂಲಕ ಪಾವತಿಸುವ ಅವಕಾಶವಿದೆ.

📌 ವಯೋಮಿತಿ

ವಯೋಮಿತಿಯ ಪ್ರಕಾರ 2026 ಮಾರ್ಚ್ 23ರಂತೆ ಅಭ್ಯರ್ಥಿಗಳ ಕನಿಷ್ಠ 15 ವರ್ಷಗಳು ಮತ್ತು ಗರಿಷ್ಠ 24 ವರ್ಷವಾಗಿರಬೇಕು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ರೈಲ್ವೇ ಇಲಾಖೆಯ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ.

📌 ಹುದ್ದೆಯ ವಿವರ

ಜನರಲ್ – 2166

ಒಬಿಸಿ- 1435

ಇಡಬ್ಲ್ಯುಎಸ್- 552

ಎಸ್ಸಿ- 800

ಎಸ್ಟಿ- 396

ಒಟ್ಟು- 5349

📌 ವಿದ್ಯಾರ್ಹತೆ

ಅಭ್ಯರ್ಥಿಗಳು ಶೇ 50ರಷ್ಟು ಅಂಕಗಳ ಜೊತೆಗೆ ಹತ್ತನೇ ತರಗತಿಯನ್ನು ಪಾಸ್ ಮಾಡಿರಬೇಕು. ಸಂಬಂಧಿತ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ:

ಐಐಟಿ ಅಂಕಗಳು ಮತ್ತು ಶೈಕ್ಷಣಿಕ ಅಂಕಗಳನ್ನು ಆಧರಿಸಿದ ಮೆರಿಟ್ ಪಟ್ಟಿಯನ್ನು ಪರಿಗಣಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News