×
Ad

Fruits-e-Kyc-Karnataka: ಮನೆಯಲ್ಲೇ ಕುಳಿತು ಮೊಬೈಲ್ನಲ್ಲಿ ಇಕೆವೈಸಿ ಮಾಡಿ

Update: 2026-03-03 17:04 IST

ಸಾಂದರ್ಭಿಕ ಚಿತ್ರ | Photo Credit : freepik

ನೀವು ಈಗಾಗಲೇ Fruits ಖಾತೆಯನ್ನು ಹೊಂದಿದ್ದರೆ ಪೋರ್ಟಲ್ನಲ್ಲಿ ನೇರವಾಗಿ ಲಾಗಿನ್ ಮಾಡಬಹುದು. ಆದರೆ Fruits ಐಡಿ ಹೊಂದಿಲ್ಲದಿದ್ದರೆ ನಿಮ್ಮದೇ ಆದ ಒಂದು ಖಾತೆಯನ್ನು ಸೃಜಿಸಿಕೊಳ್ಳಬೇಕು:

ಪಿಎಂ ಕಿಸಾನ್ ಸೇರಿದಂತೆ ಸರ್ಕಾರದ ಕೃಷಿ ಯೋಜನೆಗಳ ಲಾಭ ಪಡೆಯಲು ಮತ್ತು ಹೊಸದಾಗಿ ಸೆಂಟ್ರಲ್ ಫಾರ್ಮರ್ ಐಡಿ ಸೃಜಿಸಲು ರೈತರು ‘ಫ್ರೂಟ್ಸ್’ (Fruits-e-kyc-Karnataka) ತಂತ್ರಾಂಶದಲ್ಲಿ ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ.

ಆದರೆ, ಇದಕ್ಕಾಗಿ ರೈತರು ತಮ್ಮ ಕೆಲಸ-ಕಾರ್ಯ ಬಿಟ್ಟು ರೈತ ಸಂಪರ್ಕ ಕೇಂದ್ರ ಅಥವಾ ಸೈಬರ್ ಸೆಂಟರ್ಗಳ ಮುಂದೆ ಗಂಟೆಗಟ್ಟಲೆ ಕಾಯುವ ಅಗತ್ಯವಿಲ್ಲ. ಸ್ವತಃ ರೈತರೇ ‘ಸಿಟಿಜನ್ ಲಾಗಿನ್’ ಮೂಲಕ ತಮ್ಮ ಕೈಯಲ್ಲಿರುವ ಸ್ಮಾರ್ಟ್ಫೋನ್ ಬಳಸಿ ಕೇವಲ 5 ನಿಮಿಷಗಳಲ್ಲಿ ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಬಹುದು. ವಿವರ ಈ ಕೆಳಗಿನಂತಿದೆ:

ಖಾತೆ ಸೃಷ್ಟಿಸುವುದು ಹೇಗೆ?

ನೀವು ಈಗಾಗಲೇ Fruits ಖಾತೆಯನ್ನು ಹೊಂದಿದ್ದರೆ ಪೋರ್ಟಲ್ನಲ್ಲಿ ನೇರವಾಗಿ ಲಾಗಿನ್ ಮಾಡಬಹುದು. ಆದರೆ Fruits ಐಡಿ ಹೊಂದಿಲ್ಲದಿದ್ದರೆ ಈ ಕೆಳಗಿನಂತೆ ನಿಮ್ಮದೇ ಆದ ಒಂದು ಖಾತೆಯನ್ನು ಸೃಜಿಸಿಕೊಳ್ಳಬೇಕು:

1. ಮೊಬೈಲ್ನ ಗೂಗಲ್ ಕ್ರೋಮ್ನಲ್ಲಿ/ಅಥವಾ ಸಫಾರಿಯಲ್ಲಿ https://fruits.karnataka.gov.in/ ಎಂದು ಸರ್ಚ್ ಮಾಡಿ ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ತೆರೆಯಿರಿ.

2. ಮುಖಪುಟದಲ್ಲಿರುವ ‘ಸಿಟಿಜನ್ ಲಾಗಿನ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

3. ಕೆಳಗೆ ‘ಸಿಟಿಜನ್ ರಿಜಿಸ್ಟ್ರೇಶನ್’ (ನಾಗರಿಕ ನೋಂದಣಿ) ಎಂಬ ಲಿಂಕ್ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.

4. ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ. ಒಪ್ಪಿಗೆ ಬಾಕ್ಸ್ಗೆ ಟಿಕ್ ಮಾಡಿ, ‘ಒಟಿಪಿ’ ಆಯ್ಕೆಯನ್ನು ಆರಿಸಿಕೊಂಡು ‘ಸಬ್ಮಿಟ್’ ಬಟನ್ ಒತ್ತಿ.

5. ನಿಮ್ಮ ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ಗೆ ಬರುವ ಒಟಿಪಿಯನ್ನು ಹಾಕಿ ದೃಢೀಕರಿಸಿ.

6. ಕೊನೆಯದಾಗಿ, ನಿಮಗೆ ಸುಲಭವಾಗಿ ನೆನಪಿನಲ್ಲಿರುವಂತಹ ಹೊಸ ‘ಪಾಸ್ವರ್ಡ್’ ಅನ್ನು ಎರಡು ಬಾರಿ ಟೈಪ್ ಮಾಡಿ ‘ಕ್ರಿಯೇಟ್ ಪಾಸ್ವರ್ಡ್’ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಖಾತೆ ಯಶಸ್ವಿಯಾಗಿ ಸೃಷ್ಟಿಯಾಗುತ್ತದೆ.

Fruits-e-Kyc-Karnataka ಮಾಡುವುದು ಹೇಗೆ?

ನಿಮ್ಮ ಅಕೌಂಟ್ ಸೃಷ್ಟಿಯಾದ ನಂತರ ಮತ್ತೆ ‘ಸಿಟಿಜನ್ ಲಾಗಿನ್’ ಮುಖಪುಟಕ್ಕೆ ಬನ್ನಿ:

1. ನಿಮ್ಮ ಮೊಬೈಲ್ ಸಂಖ್ಯೆ, ಈಗಷ್ಟೆ ನೀವು ಸೆಟ್ ಮಾಡಿದ ಪಾಸ್ವರ್ಡ್ ಮತ್ತು ಅಲ್ಲಿ ಕಾಣುವ ಕ್ಯಾಪ್ಚಾ ಕೋಡ್ ಹಾಕಿ ಲಾಗಿನ್ ಆಗಿ. (ಲಾಗಿನ್ ಆಗುವಾಗಲೂ ನಿಮ್ಮ ಭದ್ರತೆಗಾಗಿ ಒಂದು ಒಟಿಪಿ ಬರುತ್ತದೆ.) ಅದನ್ನು ನಮೂದಿಸಿ.

2. ಲಾಗಿನ್ ಆದ ಕೂಡಲೇ ನಿಮ್ಮ ಡ್ಯಾಷ್ಬೋರ್ಡ್ನಲ್ಲಿ ‘ಇ-ಕೆವೈಸಿ’ ಮತ್ತು ‘ಫಾರ್ಮರ್ ಕನ್ಸೆಂಟ್’ ಎಂಬ ಎರಡು ಪ್ರಮುಖ ಆಯ್ಕೆಗಳು ಕಾಣಿಸುತ್ತವೆ.

3. ಮೊದಲು ಇ-ಕೆವೈಸಿ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ. ಆಧಾರ್ ಒಟಿಪಿ ಮೂಲಕ ದೃಢೀಕರಿಸಿದರೆ ‘ಇ-ಕೆವೈಸಿ ಸಕ್ಸೆಸ್ಫುಲೀ ಅಪ್ಡೇಟೆಡ್’ ಎಂಬ ಸಂದೇಶ ಬರುತ್ತದೆ. ಅಲ್ಲಿಗೆ ಇ-ಕೆವೈಸಿ ಮುಗಿಯಿತು.

ರೈತ ಸಹಮತಿ ಪತ್ರ

ಇ-ಕೆವೈಸಿ ಮುಗಿದ ತಕ್ಷಣ ಮಾಡಬೇಕಾದ ಅತಿ ಮುಖ್ಯವಾದ ಕೆಲಸವಿದು. ಇದನ್ನು ಮಾಡದೆ ಇದ್ದರೆ, ನಿಮ್ಮ ಸೆಂಟ್ರಲ್ ಐಡಿ ರಚನೆಯಾಗುವುದಿಲ್ಲ:

1. ಪೋರ್ಟಲ್ನಲ್ಲಿರುವ ‘ಫಾರ್ಮರ್ ಕನ್ಸೆಂಟ್’ (ರೈತ ಸಹಮತಿ ಪತ್ರ) ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

2. ಕೃಷಿ ಇಲಾಖೆಯ ಯೋಜನೆಗಳಿಗೆ ನಿಮ್ಮ ಆಧಾರ್ ಮಾಹಿತಿಯನ್ನು ಬಳಸಲು ಒಪ್ಪಿಗೆ ಸೂಚಿಸುವ ಅಧಿಕೃತ ಡಿಕ್ಲರೇಶನ್ ಅಲ್ಲಿರುತ್ತದೆ.

3. ನಂತರ ಅಲ್ಲಿಯೇ ಇರುವ ಇ-ಸೈನ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.

4. ಇದು ನಿಮ್ಮನ್ನು ಇ-ಸೈನ್ ವೆಬ್ಪುಟಕ್ಕೆ ಕೊಂಡೊಯ್ಯುತ್ತದೆ. ಅಲ್ಲಿ ಮತ್ತೆ ನಿಮ್ಮ ಆಧಾರ್ ಸಂಖ್ಯೆ ಹಾಕಿ, ಒಟಿಪಿ ನಮೂದಿಸಿ ಸಬ್ಮಿಟ್ ಮಾಡಿದರೆ, ‘ಇ-ಸೈನ್ಡ್ ಫಾರ್ಮರ್ ಕನ್ಸೆಂಟ್ ಸೇವ್ಡ್ ಸಕ್ಸೆಸ್ಫುಲೀ’ (ಇಸಮ್ಮತಿ ರೈತರ ಒಪ್ಪಿಗೆಯನ್ನು ಯಶಸ್ವಿಯಾಗಿ ಉಳಿಸಲಾಗಿದದೆ) ಎಂಬ ಸಂದೇಶ ಬರುತ್ತದೆ.

ಕೇಂದ್ರ ಸರ್ಕಾರದ ‘ಸೆಂಟ್ರಲ್ ಫಾರ್ಮರ್ ಐಡಿ’ ಯಶಸ್ವಿಯಾಗಿ ಜನರೇಟ್ ಆಗಲು ಮುಖ್ಯವಾಗಿ ಬೇಕಿರುವುದು ಈ ‘ಇ-ಕೆವೈಸಿ’ ಮತ್ತು “ಫಾರ್ಮರ್ ಕನ್ಸೆಂಟ್’ ಮಾತ್ರ. ಈ ಎರಡು ಹಂತಗಳನ್ನು ನೀವು ಸರಿಯಾಗಿ ಮುಗಿಸಿದರೆ ನಿಮ್ಮ ಕೆಲಸ ಶೇ 100 ಪೂರ್ಣಗೊಂಡಂತೆ ಸರಿ. ಜೊತೆಗೆ ಇದೇ ಸಿಟಿಜನ್ ಲಾಗಿನ್ ಪೋರ್ಟಲ್ನಲ್ಲಿ ನೀವು ನಿಮ್ಮ ಹಳೆಯ ಮೊಬೈಲ್ ನಂಬರ್ ಬದಲಿಸಿ ಹೊಸ ನಂಬರ್ ಅನ್ನು ಅಪ್ಡೇಟ್ ಮಾಡಿಕೊಳ್ಳುವ ಅಗತ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News