ಎಕ್ಸಿಮ್ ಬ್ಯಾಂಕ್‌ನಲ್ಲಿ ಡೆಪ್ಯುಟಿ ಮ್ಯಾನೇಜರ್ ಹುದ್ದೆಗೆ ನೇಮಕಾತಿ
Photo Credit : Exim Bank
ಇಂಡಿಯನ್ ಎಕ್ಸಿಮ್ ಬ್ಯಾಂಕ್ನ ಡೆಪ್ಯೂಟಿ ಮ್ಯಾನೇಜರ್ ನೇಮಕಾತಿಗೆ ಅಧಿಸೂಚನೆಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. 20 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಇಂಡಿಯನ್ ಎಕ್ಸಿಮ್ ಬ್ಯಾಂಕ್ನ ಡೆಪ್ಯೂಟಿ ಮ್ಯಾನೇಜರ್ ನೇಮಕಾತಿಗೆ ಅಧಿಸೂಚನೆಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. 20 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಎಕ್ಸಿಮ್ ಬ್ಯಾಂಕ್ ಅರ್ಜಿ ಸಲ್ಲಿಕೆ 2026 ಜನವರಿ 26ರಿಂದ ಪ್ರಾರಂಭವಾಗಲಿದ್ದು, ಅಭ್ಯರ್ಥಿಗಳು 2026 ಫೆಬ್ರವರಿ 15 ರವರೆಗೆ ಅರ್ಜಿ ಸಲ್ಲಿಸಬಹುದು. 31 ಡಿಸೆಂಬರ್ 2025ರಂತೆ ಕನಿಷ್ಠ ವಯಸ್ಸು 21 ವರ್ಷಗಳು ಮತ್ತು ಗರಿಷ್ಠ ವಯಸ್ಸು 28 ವರ್ಷಗಳು. ಕೆಳಗೆ ನೀಡಲಾದ ಎಕ್ಸಿಮ್ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್ ನೇಮಕಾತಿ 2026 ಗಾಗಿ ಅಭ್ಯರ್ಥಿಗಳು ಕೆಳಗಿನ ಲಿಂಕ್‌ನಲ್ಲಿ ಅರ್ಜಿ ಸಲ್ಲಿಸಬಹುದು:
https://ibpsreg.ibps.in/iebdmnov25/
ಪ್ರಮುಖ ದಿನಾಂಕಗಳು
• ಆನ್‌ಲೈನ್ ಅರ್ಜಿ ಆರಂಭ: 26 ಜನವರಿ 2026
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಫೆಬ್ರವರಿ 2026
• ಶುಲ್ಕ ಪಾವತಿಗೆ ಕೊನೆಯ ದಿನಾಂಕ: 15 ಫೆಬ್ರವರಿ 2026
• ಪರೀಕ್ಷೆ ದಿನಾಂಕ: ಶೀಘ್ರವೇ ಅಪ್‌ಡೇಟ್ ಮಾಡಲಾಗುವುದು.
• ಭರ್ತಿ ಕಾರ್ಡ್: ಪರೀಕ್ಷೆಗೆ ಮೊದಲು
• ಫಲಿತಾಂಶ ದಿನಾಂಕ: ಶೀಘ್ರವೇ ಅಪ್‌ಡೇಟ್ ಮಾಡಲಾಗುವುದು.
ವಿವರಗಳಿಗೆ ಅಭ್ಯರ್ಥಿಗಳು ಈ ಕೆಳಗಿನ ಎಕ್ಸಿಮ್ ಬ್ಯಾಂಕ್‌ನ ಅಧಿಕೃತ ವೆಬ್‌ತಾಣವನ್ನು ಪರೀಕ್ಷಿಸಬೇಕು:
ಅರ್ಜಿ ಶುಲ್ಕ
• ಜನರಲ್/ಒಬಿಸಿ/ಇಡಬ್ಲ್ಯುಎಸ್: 600 ರೂ.
• ಎಸ್‌ಸಿ/ಎಸ್‌ಟಿ/ ಪಿಡಬ್ಲ್ಯುಡಿ: 100 ರೂ.
• ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್‌ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವಾಲೆಟ್ ಮೂಲಕ ಪಾವತಿಸುವ ಅವಕಾಶವಿದೆ.
ವಯೋಮಿತಿ:
ಕನಿಷ್ಢ ವರ್ಷ: 21 ವರ್ಷಗಳು
ಗರಿಷ್ಠ ವರ್ಷ: 28 ವರ್ಷಗಳು
ಎಕ್ಸಿಮ್ ಬ್ಯಾಂಕ್ ನೇಮಕಾತಿ ಹುದ್ದೆಗೆ ಅವರ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡುತ್ತದೆ.
ಒಟ್ಟು ಹುದ್ದೆಗಳು
20 ಹುದ್ದೆಗಳು
ಹುದ್ದೆಗಳ ವಿವರ
ಎಕ್ಸಿಮ್ ಬ್ಯಾಂಕ್ ಡೆಪ್ಯುಟಿ ಮ್ಯಾನೇಜರ್- 20 ಹುದ್ದೆಗಳು
ವಿದ್ಯಾರ್ಹತೆ
ಅಭ್ಯರ್ಥಿಗಳು MBA / PGDBA / PGDBM / MMS ನಂತಹ ಸ್ನಾತಕೋತ್ತರ ಪದವಿಯನ್ನು ಹಣಕಾಸು / ಅಂತರರಾಷ್ಟ್ರೀಯ ವ್ಯವಹಾರ / ವಿದೇಶಿ ವ್ಯಾಪಾರದಲ್ಲಿ ವಿಶೇಷತೆಯೊಂದಿಗೆ ಹೊಂದಿರಬೇಕು, ಅಥವಾ ಚಾರ್ಟರ್ಡ್ ಅಕೌಂಟೆಂಟ್ (CA) ಆಗಿರಬೇಕು (ವೃತ್ತಿಪರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ ಸಾಕಾಗುತ್ತದೆ).