×
Ad

ಸುಪ್ರೀಂಕೋರ್ಟ್ ನಲ್ಲಿ ಕಾನೂನು ಪದವೀಧರರಿಗೆ ಕ್ಲರ್ಕ್ ಹುದ್ದೆಗಳು; ಅರ್ಜಿ ಸಲ್ಲಿಸುವುದು ಹೇಗೆ?

Update: 2026-01-27 18:37 IST

 ಸುಪ್ರೀಂ ಕೋರ್ಟ್ | Photo Credit : waas.gov.in

ಅರ್ಜಿದಾರರು ಕಾನೂನು ಪದವೀಧರರು ಅಥವಾ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳಾಗಿರಬೇಕು. 20-32 ವರ್ಷ ವಯಸ್ಸಿನವರಾಗಿರಬೇಕು. ಸಂಶೋಧನೆ ಪ್ರವೃತ್ತಿ ಮತ್ತು ಕಂಪ್ಯೂಟರ್ ಕೌಶಲ್ಯಗಳನ್ನು ಹೊಂದಿರಬೇಕು.

ಹೊಸದಿಲ್ಲಿಯ ಸುಪ್ರೀಂ ಕೋರ್ಟ್ ಆಫ್ ಇಂಡಿಯಾ (SCI) ಗುಮಾಸ್ತರ ಹುದ್ದೆಯ ನೇಮಕಾತಿಗಾಗಿ ಅಧಿಕೃತ ವೆಬ್ಸೈಟ್ನಲ್ಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಸುಪ್ರೀಂಕೋರ್ಟ್ ಒಂದು ವರ್ಷದ ಒಪ್ಪಂದದ (2026–2027) ಮೇಲೆ ಸುಪ್ರೀಕೋರ್ಟ್ ಲಾ ಕ್ಲರ್ಕ್ ಹುದ್ದೆಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ 90 ಹುದ್ದೆಗಳಿಗೆ ಆಗುತ್ತಿದೆ. ಅರ್ಜಿದಾರರು ಕಾನೂನು ಪದವೀಧರರು ಅಥವಾ ಕಾನೂನು ಅಂತಿಮ ವರ್ಷದ ವಿದ್ಯಾರ್ಥಿಗಳಾಗಿರಬೇಕು. 20-32 ವರ್ಷ ವಯಸ್ಸಿನವರಾಗಿರಬೇಕು. ಸಂಶೋಧನೆ ಪ್ರವೃತ್ತಿ ಮತ್ತು ಕಂಪ್ಯೂಟರ್ ಕೌಶಲ್ಯಗಳನ್ನು ಹೊಂದಿರಬೇಕು.

ಆಯ್ಕೆಯು ಬಿಟ್ಟಪದ ತುಂಬಿ ರೀತಿಯ ಪ್ರಶ್ನೆಗಳ ಪರೀಕ್ಷೆ, ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ಒಳಗೊಂಡಿರುತ್ತದೆ. ಅರ್ಜಿಗಳು 2026 ಜನವರಿ 20ರಿಂದ 2026 ಫೆಬ್ರವರಿ 7ರವರೆಗೆ ತೆರೆದಿರುತ್ತವೆ. ಪರೀಕ್ಷೆಗಳು 2026 ಮಾರ್ಚ್ 7ರಂದು ನಡೆಯಲಿವೆ. ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 20 ವರ್ಷಗಳು ಮತ್ತು ಗರಿಷ್ಟ ವಯಸ್ಸು 32 ವರ್ಷಗಳು. ಸುಪ್ರೀಂಕೋರ್ಟ್ ಲಾ ಕ್ಲರ್ಕ್ಗೆ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ನಲ್ಲಿ ಅರ್ಜಿ ಸಲ್ಲಿಸಬಹುದು:

https://cdn3.digialm.com/EForms/configuredHtml/32912/97660/Registration.html

ಪ್ರಮುಖ ದಿನಾಂಕಗಳು

ಆನ್ಲೈನ್ ಅರ್ಜಿ ಆರಂಭ: 20 ಜನವರಿ 2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07 ಫೆಬ್ರವರಿ 2026

ಶುಲ್ಕ ಪಾವತಿಗೆ ಕೊನೆಯ ದಿನಾಂಕ: 07 ಫೆಬ್ರವರಿ 2026

ಪರೀಕ್ಷೆ ದಿನಾಂಕ: 07 ಮಾರ್ಚ್ 2026

ಭರ್ತಿ ಕಾರ್ಡ್: ಪರೀಕ್ಷೆಗೆ ಮೊದಲು

ಫಲಿತಾಂಶ ದಿನಾಂಕ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು.

ಪರೀಕ್ಷಾ ಕೇಂದ್ರಗಳು: ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತ್ತಾ, ಚೆನ್ನೈ, ಹೈದರಾಬಾದ್, ಲಖನೌ, ಪಾಟ್ನಾ ಇತ್ಯಾದಿ

• ವಿವರಗಳಿಗೆ ಅಭ್ಯರ್ಥಿಗಳು ಭಾರತೀಯ ಸುಪ್ರೀಂಕೋರ್ಟ್ನ ಅಧಿಕೃತ ವೆಬ್ತಾಣವನ್ನು ಪರೀಕ್ಷಿಸಿ ದೃಢಪಡಿಸಬಹುದು.

ಅರ್ಜಿ ಶುಲ್ಕ

• ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ- ರೂ 750/-

• ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವಾಲೆಟ್ ಮೂಲಕ ಪಾವತಿಸುವ ಅವಕಾಶವಿದೆ.

ವಯೋಮಿತಿ

ಕನಿಷ್ಠ ವಯಸ್ಸು- 20 ವರ್ಷಗಳು

ಗರಿಷ್ಠ ವಯಸ್ಸು 32 ವರ್ಷಗಳು

ಹೆಚ್ಚುವರಿ ವಯೋಮಿತಿ ಸಡಿಲಿಕೆ ವಿವರಗಳು ಸುಪ್ರೀಕೋರ್ಟ್ನ ನೇಮಕಾತಿ ನಿಯಮಗಳಿಗೆ ತಕ್ಕಂತೆ ನೀಡಲಾಗುವುದು.

ಒಟ್ಟು ಹುದ್ದೆಗಳು

90 ಹುದ್ದೆಗಳು

ಹುದ್ದೆಯ ಹೆಸರು

ಲಾ ಕ್ಲರ್ಕ್ ಕಮ್ ರೀಸರ್ಚ್ ಅಸೋಸಿಯೇಟ್ – 90 ಹುದ್ದೆಗಳು

ವಿದ್ಯಾರ್ಹತೆ

ಅಭ್ಯರ್ಥಿಗಳು ಅಂತಿಮ ವರ್ಷದ ಕಾನೂನು ಪದವಿಗೆ ಹಾಜರಾಗುತ್ತಿರಬೇಕು ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಅಥವಾ ಸಂಸ್ಥೆಯಿಂದ ಕಾನೂನು ಪದವಿಯಲ್ಲಿ ಉತ್ತೀರ್ಣರಾಗಿರಬೇಕು.

ಅಗತ್ಯವಿರುವ ಕೌಶಲ್ಯಗಳು: ಸಂಶೋಧನೆ, ವಿಶ್ಲೇಷಣಾತ್ಮಕ ಸಾಮರ್ಥ್ಯ, ಬರವಣಿಗೆ ಕೌಶಲ್ಯಗಳು, ಕಂಪ್ಯೂಟರ್ ಪ್ರಾವೀಣ್ಯತೆ (ಎಸ್ಸಿಸಿ ಆನ್ಲೈನ್, ಮನುಪತ್ರ, ಲೆಕ್ಸಿಸ್ನೆಕ್ಸಿಸ್, ವೆಸ್ಟ್ಲಾ ಇತ್ಯಾದಿ)

ಪರೀಕ್ಷೆಯ ವಿವರ

ಭಾಗ 1 ಲಿಖಿತ ಪರೀಕ್ಷೆ ಅಬ್ಜೆಕ್ಟಿವ್ ವಿಧ (ಕಾನೂನು ಸಂಬಂಧಿತ ಜ್ಞಾನ)

ಭಾಗ 2 ಲಿಖಿತ ಪರೀಕ್ಷೆ ಸಬ್ಜೆಕ್ಟಿವ್ ವಿಧ (ವಿಶ್ಲೇಷಣೆ ಮತ್ತು ಬರವಣಿಗೆ ಕೌಶಲ್ಯ)

ತಪ್ಪು ಉತ್ತರಕ್ಕೆ 0.25ರಷ್ಟು ಅಂಕಗಳನ್ನು ಕಳೆಯಲಾಗುತ್ತದೆ

ಕನಿಷ್ಠ ಅರ್ಹತಾ ಅಂಕಗಳು- ಭಾಗ 1ರಲ್ಲಿ ಶೇ 60. ಭಾಗ 2ರಲ್ಲಿ 1:10, ಸಂದರ್ಶನಕ್ಕೆ 1:3.

ಅರ್ಹ ವಿದ್ಯಾರ್ಥಿಗಳಿಗೆ ಸಂದರ್ಶನವಿರುತ್ತದೆ, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ

ವೇತನ-ಭತ್ಯೆ

ತಾತ್ಕಾಲಿಕ ಗುತ್ತಿಗೆ ಆಧಾರಿತ

ವೇತನ ಪ್ರತಿ ತಿಂಗಳು- 1 ಲಕ್ಷ ರೂಪಾಯಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News