ಕೊಲಂಬಿಯಾ: ಗುಂಡೇಟಿನಲ್ಲಿ ಗಾಯಗೊಂಡಿದ್ದ ಅಧ್ಯಕ್ಷೀಯ ಅಭ್ಯರ್ಥಿ ಉರಿಬೆ ನಿಧನ
Update: 2025-08-11 23:42 IST
PC | PTI
ಬೊಗೊಟ, ಆ.11: ಕೊಲಂಬಿಯಾದ ಅಧ್ಯಕ್ಷೀಯ ಚುನಾವಣೆಯ ಪ್ರಚಾರ ರ‍್ಯಾಲಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಪ್ರಮುಖ ಅಭ್ಯರ್ಥಿ ಮಿಗುವೆಲ್ ಉರಿಬೆ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ಅವರ ಕುಟುಂಬದವು ಸೋಮವಾರ ಹೇಳಿದ್ದಾರೆ.
ಮಾಜಿ ಅಧ್ಯಕ್ಷ ಜೂಲಿಯೊ ಸೀಸರ್ ಟರ್ಬೆ ಅವರ ಮೊಮ್ಮಗನಾಗಿರುವ 39 ವರ್ಷದ ಉರಿಬೆ ಜೂನ್ 7ರಂದು ರಾಜಧಾನಿ ಬೊಗೊಟದಲ್ಲಿ ಚುನಾವಣಾ ಪ್ರಚಾರ ರ‍್ಯಾಲಿಯ ಸಂದರ್ಭ ನಡೆದ ಗುಂಡಿನ ದಾಳಿಯಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುಂಡಿನ ದಾಳಿಗೆ ಸಂಬಂಧಿಸಿ ಪೊಲೀಸರು 6 ಶಂಕಿತ ಆರೋಪಿಗಳನ್ನು ಬಂಧಿಸಿದ್ದರು.