ಸಾಂದರ್ಭಿಕ ಚಿತ್ರ | Photo Credit : aljazeera.com


ಮಿನ್ನಾ, ನ. 2: ನೈಜೀರಿಯಾದ ನೈಜರ್ ರಾಜ್ಯದಲ್ಲಿ ನಡೆದಿರುವ ಇತ್ತೀಚಿನ ಸಾಮೂಹಿಕ ಅಪಹರಣ ಪ್ರಕರಣದಲ್ಲಿ, ಬಂದೂಕುಧಾರಿಗಳು ಸುಮಾರು 12 ಮಕ್ಕಳನ್ನು ಅಪಹರಿಸಿದ್ದಾರೆ ಎಂದು ಸ್ಥಳೀಯರನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಶನಿವಾರ ರಫಿ ಜಿಲ್ಲೆಯ ಮೈಗುಜೇರಿ ನಗರದ ಬಳಿ, ತಮ್ಮ ಶಾಲೆಯ ಶಿಕ್ಷಕರಿಗೆ ಜೋಳದ ಕೊಯ್ಲು ಮಾಡಲು ಸಹಾಯ ಮಾಡಿ ಹೊಲದಿಂದ ಮನೆಗೆ ಹಿಂತಿರುಗುತ್ತಿದ್ದಾಗ ಮೋಟಾರ್ ಸೈಕಲ್ ನಲ್ಲಿ ಬಂದ ಬಂದೂಕುಧಾರಿಗಳು ಮಕ್ಕಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದಾಳಿಯ ಸಂದರ್ಭದಲ್ಲಿ ಒಂದು ಮಗುವಿಗೆ ಗುಂಡೇಟು ಬಿದ್ದಿದ್ದು, ರಾಜ್ಯದ ರಾಜಧಾನಿ ಮಿನ್ನಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯವಾಗಿ ‘ಬ್ಯಾಂಡಿಟ್ಸ್’ ಎಂದು ಕರೆಯಲ್ಪಡುವ ಭಾರಿ ಶಸ್ತ್ರಸಜ್ಜಿತ ಅಪರಾಧಿ ಗುಂಪುಗಳಿಂದ ಇತ್ತೀಚಿನ ದಿನಗಳಲ್ಲಿ ನೈಜರ್ ರಾಜ್ಯದಲ್ಲಿ ಹಿಂಸಾತ್ಮಕ ದಾಳಿ, ಅಪಹರಣ ಮತ್ತು ಜಾನುವಾರು ಕಳವು ಹೆಚ್ಚಾಗಿದ್ದು, ಈ ಅಪಹರಣವು ಅಂತಹ ಸರಣಿ ದಾಳಿಗಳ ಭಾಗವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor