ಬಲ್ಗೇರಿಯಾದ ಮೊದಲ ಚುನಾಯಿತ ಮಹಿಳಾ ಅಧ್ಯಕ್ಷೆಯಾಗಿ ಇಲಿಯಾನಾ ಯೋಟೋವಾ ಆಯ್ಕೆ
ಇಲಿಯಾನಾ ಯೋಟೋವಾ | Photo Credit : aljazeera.com
ಸೋಫಿಯಾ, ನ. 2: ಹಂಗಾಮಿ ಅಧ್ಯಕ್ಷೆ ಇಲಿಯಾನಾ ಯೋಟೋವಾ ಅವರು ಬಲ್ಗೇರಿಯಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿದ್ದು, ಮೊದಲ ಚುನಾಯಿತ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಸೋಮವಾರ ಎಲ್ಲಾ ಮತಗಳ ಎಣಿಕೆ ಮುಗಿದ ನಂತರ, ಯೋಟೋವಾ ಶೇ. 57.6ರಷ್ಟು ಮತಗಳನ್ನು ಪಡೆದಿದ್ದರೆ, ಉದಾರವಾದಿ ಮತ್ತು ಪಾಶ್ಚಿಮಾತ್ಯ ಪರ ವಿರೋಧ ಪಕ್ಷದ ಅಭ್ಯರ್ಥಿ ಆಂಡ್ರೆ ಗೈರೊವ್ ಶೇ. 39.5ರಷ್ಟು ಮತಗಳನ್ನು ಪಡೆದಿದ್ದಾರೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ತಮ್ಮ ಸೋಲನ್ನು ಒಪ್ಪಿಕೊಂಡ ಗೈರೊವ್, ಫಲಿತಾಂಶಗಳನ್ನು ಯಥಾವತ್ತಾಗಿ ಸ್ವೀಕರಿಸಬೇಕು ಎಂದು ಹೇಳಿದ್ದಾರೆ.