Photo Credit : AP

ಟೆಹರಾನ್, ನ. 2: ಅಮೆರಿಕ ತನ್ನ ಷರತ್ತುಗಳನ್ನು ಈಡೇರಿಸಿದರೆ ಎರಡು ದಿನಗಳಲ್ಲಿ ಹಾರ್ಮುಝ್ ಜಲಸಂಧಿಯನ್ನು ಮರುಸಂಪರ್ಕಕ್ಕೆ ಮುಕ್ತಗೊಳಿಸಲು ಸಿದ್ಧವಿರುವುದಾಗಿ ಇರಾನ್ ನ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯೀಲ್ ಬಗಾಯಿ ಸೋಮವಾರ ತಿಳಿಸಿದ್ದಾರೆ.

ಮಧ್ಯವರ್ತಿಗಳ ಮೂಲಕ ಅಮೆರಿಕದೊಂದಿಗೆ ಸಂದೇಶಗಳ ವಿನಿಮಯ ನಡೆಯುತ್ತಿದ್ದು, ಎಲ್ಲವೂ ಅಮೆರಿಕನ್ನರು ಇರಾನ್ ನ ಬೇಡಿಕೆಗಳನ್ನು ಒಪ್ಪಿಕೊಳ್ಳುವುದರ ಮೇಲೆಯೇ ಆಧಾರಿತವಾಗಿದೆ. ಅದರ ನಂತರವಷ್ಟೇ ನಾವು ಮುಂದಿನ ಹಂತಗಳ ಕುರಿತು ಚರ್ಚಿಸಬಹುದು ಎಂದು ಬಗಾಯಿ ಹೇಳಿರುವುದಾಗಿ ಎಎಫ್ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಎಎಫ್ಪಿ ವರದಿಯ ಪ್ರಕಾರ, ಇರಾನ್ ನ ಬೇಡಿಕೆಗಳಲ್ಲಿ ಮಧ್ಯಪ್ರಾಚ್ಯ ಯುದ್ಧವನ್ನು ಎಲ್ಲಾ ರಂಗಗಳಲ್ಲೂ ಅಂತ್ಯಗೊಳಿಸುವುದು, ವಿದೇಶಗಳಲ್ಲಿರುವ ಇರಾನ್ ನ ಸ್ವತ್ತುಗಳ ಮೇಲಿನ ಮುಟ್ಟುಗೋಲನ್ನು ತೆರವುಗೊಳಿಸುವುದು, ಅದರ ತೈಲ ವಲಯದ ಮೇಲಿನ ನಿರ್ಬಂಧಗಳನ್ನು ಹಿಂಪಡೆಯುವುದು ಮತ್ತು ಅಮೆರಿಕದ ನೌಕಾ ದಿಗ್ಬಂಧನವನ್ನು ಕೊನೆಗೊಳಿಸುವುದು ಸೇರಿವೆ.

ಜಲಸಂಧಿಯ ಮೂಲಕ ಹಾದುಹೋಗಲು ಇರಾನ್ ಮತ್ತು ಒಮಾನ್ ನಡುವೆ ಸಮ್ಮತಿಸಲಾದ ಹೊಸ ಮಾರ್ಗವನ್ನು ಅಮೆರಿಕ ಒಪ್ಪಿಕೊಳ್ಳಬೇಕು. ಇತ್ತೀಚಿನ ತಿಂಗಳುಗಳಲ್ಲಿ ಹೇರಲಾದ ನಿರ್ಬಂಧಗಳನ್ನು ಅಮೆರಿಕ ತೆರವುಗೊಳಿಸಬೇಕು ಮತ್ತು ಪ್ರದೇಶದಲ್ಲಿನ ಅಮೆರಿಕನ್ ಪಡೆಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor