×
Ad

ಬೆಲ್ಜಿಯಂ| ಶಾಲಾ ಬಸ್ಸಿಗೆ ರೈಲು ಢಿಕ್ಕಿ; ಇಬ್ಬರು ಮಕ್ಕಳು ಸಹಿತ 4 ಮಂದಿ ಮೃತ್ಯು

Update: 2026-05-26 23:11 IST

Photo Credit : x@hans_kluge

ಬ್ರಸೆಲ್ಸ್, ಮೇ 26: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್ಸಿಗೆ ರೈಲು ಢಿಕ್ಕಿಯಾಗಿ ಇಬ್ಬರು ಮಕ್ಕಳ ಸಹಿತ 4 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಬೆಲ್ಜಿಯಂನ ಬುಗೆನ್‍ಹೌಟ್‍ನಲ್ಲಿ ಮಂಗಳವಾರ ನಡೆದಿದೆ.

ಬಸ್ಸಿನಲ್ಲಿ 7 ಮಕ್ಕಳ ಸಹಿತ 9 ಮಂದಿಯಿದ್ದರು. ಲೆವೆಲ್ ಕ್ರಾಸಿಂಗ್‍ನಲ್ಲಿ ತಡೆಬೇಲಿಯನ್ನು ತೆರವುಗೊಳಿಸಿದ್ದರಿಂದ ಬಸ್ಸಿನ ಡ್ರೈವರ್ ರಸ್ತೆ ದಾಟಲು ಮುಂದಾದಾಗ ಗಂಟೆಗೆ 90 ಕಿ.ಮೀ ವೇಗದಲ್ಲಿ ಧಾವಿಸಿ ಬಂದ ರೈಲು ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬಸ್ಸು ಕೆಲವು ಮೀಟರ್ ದೂರವಿದ್ದ ಮನೆಯ ಅಂಗಳಕ್ಕೆ ಎಸೆಯಲ್ಪಟ್ಟಿದ್ದು ಇಬ್ಬರು ಮಕ್ಕಳು ಹಾಗೂ ಡ್ರೈವರ್, ಸಹಾಯಕ ಮೃತಪಟ್ಟಿದ್ದಾರೆ. ಇತರ ಐವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News