×
Ad

ಯುರೋಪ್‌ನಲ್ಲಿ ಅತಿ ಹೆಚ್ಚು ತಾಪಮಾನ ದಾಖಲು| ಫ್ರಾನ್ಸ್‌ನಲ್ಲಿ ಉಷ್ಣ ಹವೆಗೆ ಕನಿಷ್ಠ 7 ಮಂದಿ ಮೃತ್ಯು

Update: 2026-05-26 23:14 IST

ಲಂಡನ್, ಮೇ 26: ಪಶ್ಚಿಮ ಯುರೋಪ್‍ನಲ್ಲಿ ತಾಪಮಾನ ದಾಖಲೆ ಮಟ್ಟಕ್ಕೆ ಹೆಚ್ಚಿದ್ದು ಫ್ರಾನ್ಸ್ ಮತ್ತು ಬ್ರಿಟನ್‍ನಲ್ಲಿ ಮಂಗಳವಾರ ಗರಿಷ್ಠ ತಾಪಮಾನ ದಾಖಲಾಗಿದೆ.

ಉತ್ತರ ಆಫ್ರಿಕಾದಿಂದ ಪಶ್ಚಿಮ ಯುರೋಪ್‍ನಾದ್ಯಂತ ಬಿಸಿ ಗಾಳಿಯನ್ನು ಸಾಗಿಸುವ ಉಷ್ಣ ಹವೆಯು ತಾಪಮಾನವನ್ನು ಅಸಾಮಾನ್ಯ ಮಟ್ಟಕ್ಕೆ ಏರಿಸಿದೆ. ಮಾನವ ಚಾಲಿತ ಹವಾಮಾನ ಬದಲಾವಣೆಯಿಂದಾಗಿ ಯುರೋಪ್ ಜಾಗತಿಕ ಸರಾಸರಿಗಿಂತ ವೇಗವಾಗಿ ಬಿಸಿಯಾಗುತ್ತಿದೆ. ಶಾಖದ ಅಲೆಗಳು ಮತ್ತಷ್ಟು ತೀವ್ರಗೊಳ್ಳಬಹುದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಬ್ರಿಟನ್‍ನಲ್ಲಿ ಅಸಾಮಾನ್ಯ ಉಷ್ಣತೆ ವರದಿಯಾಗಿದ್ದು ಸೋಮವಾರ ತಾಪಮಾನ 34.8 ಡಿಗ್ರಿ ಸೆಲ್ಶಿಯಸ್ ತಲುಪಿದ್ದು ಇದು ಹೊಸ ದಾಖಲೆಯಾಗಿದೆ.

ಫ್ರಾನ್ಸ್‌ನಲ್ಲಿ ಸೋಮವಾರ ಅತೀ ಹೆಚ್ಚಿನ ತಾಪಮಾನ ದಾಖಲಾಗಿದ್ದು ಇದುವರೆಗೆ ಉಷ್ಣ ಹವೆಗೆ ನೇರ ಅಥವಾ ಪರೋಕ್ಷವಾಗಿ ಸಂಬಂಧಿಸಿದ ದುರಂತದಲ್ಲಿ ಕನಿಷ್ಠ 7 ಮಂದಿ ಮೃತಪಟ್ಟಿದ್ದು ವಾಯವ್ಯ ಫ್ರಾನ್ಸ್‌ಗೆ ಆರೆಂಜ್ ಅಲರ್ಟ್ ಜಾರಿಗೊಳಿಸಲಾಗಿದೆ.

ದೇಶದಾದ್ಯಂತ ಶನಿವಾರದಿಂದ ಸರಾಸರಿಗಿಂತ ಅಧಿಕ ತಾಪಮಾನ ದಾಖಲಾಗಿದೆ ಎಂದು ಫ್ರಾನ್ಸ್‌ನ ಸಹಾಯಕ ಇಂಧನ ಸಚಿವೆ ಮೌಡ್ ಬ್ರೆಗಿಯಾನ್ ಹೇಳಿದ್ದಾರೆ. ಸ್ಪೇನ್‍ನಲ್ಲಿ ಈ ವಾರಾಂತ್ಯ ತಾಪಮಾನ ಗರಿಷ್ಠ ಮಟ್ಟ ತಲುಪಲಿದೆ. ಕೆಲವು ಪ್ರದೇಶಗಳಲ್ಲಿ 40 ಡಿಗ್ರಿ ಸೆಲ್ಶಿಯಸ್ ಉಷ್ಣತೆ ದಾಖಲಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಶಾಖದ ಕಾರಣ ಇಟಲಿಯ ಕೆಲವು ಭಾಗಗಳಲ್ಲಿ ಈಗಾಗಲೇ ಹೊರಾಂಗಣ ಕೆಲಸದ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News