×
Ad

ಅಮೆರಿಕ | ಜೇನು ನೊಣಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಪಲ್ಟಿ: ಟ್ರಕ್ ನಿಂದ ಹೊರ ಬಿದ್ದ 25 ಕೋಟಿ ಜೇನು ನೊಣಗಳು!

Update: 2025-05-31 21:37 IST

PC : X 

ವಾಷಿಂಗ್ಟನ್: ಸರಿಸುಮಾರು 25 ಕೋಟಿ ಜೇನು ನೊಣಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಒಂದು ಶುಕ್ರವಾರ ಅಮೆರಿಕ-ಕೆನಡಾ ಗಡಿ ಬಳಿಯ ವಾಷಿಂಗ್ಟನ್ ರಾಜ್ಯದ ಬಳಿ ನಿಶಾಚರಿ ರಸ್ತೆಯೊಂದರಲ್ಲಿ ಪಲ್ಟಿ ಹೊಡೆದ ಪರಿಣಾಮ, ಅದೀಗ ಅಪಾಯಕಾರಿ ವಲಯವಾಗಿ ಬದಲಾಗಿದೆ ಎಂದು ಬ್ರಿಟನ್ ಮಾಧ್ಯಮ ಸಂಸ್ಥೆ BBC ವರದಿ ಮಾಡಿದೆ.

ಈ ವಾಹನವು ಪಲ್ಟಿ ಹೊಡೆದಾಗ, 31,750 ಕೆಜಿಗೂ ಹೆಚ್ಚು ಸಜೀವ ಜೇನುಗೂಡುಗಳನ್ನು ಹೊತ್ತೊಯ್ಯಲಾಗುತ್ತಿತ್ತು ಎಂದು ವರದಿಯಾಗಿದ್ದು, ಈ ಅಪಘಾತದಿಂದಾಗಿ, ಗೂಡಿನಲ್ಲಿದ್ದ ಜೇನು ನೊಣಗಳೆಲ್ಲ ಹೊರ ಬಿದ್ದಿವೆ ಎನ್ನಲಾಗಿದೆ.

ತಕ್ಷಣವೇ ಸಾರ್ವಜನಿಕ ಮುನ್ನೆಚ್ಚರಿಕೆ ಬಿಡುಗಡೆ ಮಾಡಿರುವ ಪ್ರಾಧಿಕಾರಗಳು, ಜೇನು ನೊಣಗಳ ತೀವ್ರ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ, ಈ ಪ್ರದೇಶದಲ್ಲಿ ಹಾದು ಹೋಗುವುದನ್ನು ತಡೆಗಟ್ಟಿ ಎಂದು ಜನರಿಗೆ ಅಪಾಯದ ಎಚ್ಚರಿಕೆ ನೀಡಿವೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ವಾಟ್ ಕಾಮ್ ಕೌಂಟಿ ಶರೀಫ್ ಕಚೇರಿಯು, “25 ಕೋಟಿ ಜೇನು ನೊಣಗಳು ಇದೀಗ ಗೂಡಿನಿಂದ ಹೊರ ಬಿದ್ದಿವೆ” ಎಂದು ಎಚ್ಚರಿಸಿದೆ. ಇದರಿಂದಾಗಿ, ಸಾಮಾಜಿಕ ಮಾಧ್ಯಮದಲ್ಲಿ ಗಾಬರಿ ಮತ್ತು ಕುತೂಹಲವೆರಡೂ ವ್ಯಕ್ತವಾಗುತ್ತಿವೆ.

ಘಟನೆ ನಡೆಯುತ್ತಿದ್ದಂತೆಯೇ, ಎರಡು ಡಜನ್ ಗೂ ಹೆಚ್ಚು ಸಂಖ್ಯೆಯ ಜೇನು ನೊಣ ಸಾಕಾಣಿಕೆ ತಜ್ಞರು ಸೇರಿದಂತೆ, ತುರ್ತು ಸಿಬ್ಬಂದಿಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News