×
Ad

ಮಾಲ್ಟಾ ಕರಾವಳಿ ಬಳಿ ದೋಣಿ ಮುಳುಗಿ 5 ವಲಸಿಗರ ಸಾವು

Update: 2024-02-24 23:29 IST

ಸಾಂದರ್ಭಿಕ ಚಿತ್ರ 

ವ್ಯಲೆಟ್ಟಾ : ದಕ್ಷಿಣ ಯುರೋಪ್‍ನ ದ್ವೀಪರಾಷ್ಟ್ರ ಮಾಲ್ಟಾದ ಕರಾವಳಿಯ ಬಳಿ ವಲಸಿಗರು ಪ್ರಯಾಣಿಸುತ್ತಿದ್ದ ದೋಣಿಯೊಂದು ಮುಳುಗಿ ಮಹಿಳೆಯ ಸಹಿತ 5 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ವಲಸಿಗರ ದೋಣಿ ಮುಳುಗುತ್ತಿರುವ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಮಾಲ್ಟಾದ ಸಶಸ್ತ್ರ ಪಡೆ 21 ಮಂದಿಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದೆ. ಇದರಲ್ಲಿ 8 ಮಂದಿ ಸಮುದ್ರದ ನೀರು ಕುಡಿದು ತೀವ್ರ ಅಸ್ವಸ್ಥಗೊಂಡಿದ್ದಾರೆ.

26 ಅಡಿ ಉದ್ದದ ದೋಣಿಯಲ್ಲಿ ಎಷ್ಟು ಮಂದಿ ಪ್ರಯಾಣಿಸುತ್ತಿದ್ದರು ಎಂಬ ಬಗ್ಗೆ ನಿಖರ ಮಾಹಿತಿಯಿಲ್ಲ. ಇವರಲ್ಲಿ ಹೆಚ್ಚಿನವರು ಸಿರಿಯಾ, ಎರಿಟ್ರಿಯಾ, ಇಥಿಯೋಪಿಯಾ ಮತ್ತು ಈಜಿಪ್ಟ್ ಮೂಲದವರು ಎಂದು ವರದಿಯಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News