ಉಕ್ರೇನ್‍ನ 5 ಹಳ್ಳಿಗಳು ರಶ್ಯದ ವಶಕ್ಕೆ: ವರದಿ
Update: 2026-07-05 23:22 IST
ಮಾಸ್ಕೊ, ಜು.5: ತನ್ನ ಸಶಸ್ತ್ರ ಪಡೆಗಳು ಪೂರ್ವ ಉಕ್ರೇನ್‍ನ ಐದು ಹಳ್ಳಿಗಳನ್ನು ತಮ್ಮ ಹತೋಟಿಗೆ ತೆಗೆದುಕೊಂಡಿರುವುದಾಗಿ ರಶ್ಯದ ರಕ್ಷಣಾ ಸಚಿವಾಲಯ ರವಿವಾರ ಘೋಷಿಸಿದೆ.
ಮುಂಚೂಣಿಯ ಕಾರ್ಯಾಚರಣೆಗಳನ್ನು ವಿಸ್ತರಿಸಿದ್ದು ಖಾರ್ಕಿವ್ ಪ್ರಾಂತದ ಶೈಕಿವ್ಕಾ, ನೋವಿ ಮಿರ್. ಚೆರ್ನೆಶ್ಚಿನಾ ಮತ್ತು ದ್ರುಝೆಲ್ಯುಬಿವ್ಕಾ ಹಳ್ಳಿಗಳು, ಡೊನೆಟ್ಸ್ಕ್ ಪ್ರಾಂತದ ವಸಿಲಿವ್ಕಾ ಹಳ್ಳಿಯನ್ನು ವಶಪಡಿಸಿಕೊಂಡಿರುವುದಾಗಿ ಹೇಳಿಕೆ ತಿಳಿಸಿದೆ.