×
Ad

ಯೆಮನ್ ಕರಾವಳಿಯಲ್ಲಿ ಸರಕು ನೌಕೆಯ ಮೇಲೆ ದಾಳಿ: ವರದಿ

Update: 2026-07-05 23:30 IST

ಸಾಂದರ್ಭಿಕ ಚಿತ್ರ

ಸನಾ, ಜು.5: ಯೆಮನ್ ಕರಾವಳಿಯ ಕೆಂಪು ಸಮುದ್ರದಲ್ಲಿ ಸರಕು ಸಾಗಣೆ ಹಡಗೊಂದರ ಮೇಲೆ ರವಿವಾರ ದಾಳಿ ನಡೆದಿರುವುದಾಗಿ ಬ್ರಿಟಿಷ್ ಸೇನೆ ತಿಳಿಸಿದೆ.

ಇರಾನ್ ಬೆಂಬಲಿತ ಹೌದಿ ಬಂಡುಕೋರರ ನಿಯಂತ್ರಣದಲ್ಲಿರುವ ಹೊದೈದಾ ನಗರದಿಂದ ನೈಋತ್ಯಕ್ಕೆ 30 ನಾಟಿಕಲ್ ಮೈಲು ದೂರದಲ್ಲಿ ಸಣ್ಣ ದೋಣಿಯೊಂದು ಬಲ್ಕ್ ಕ್ಯಾರಿಯರ್ ಹಡಗಿನ ಸಮೀಪ ಬಂದು ಗುಂಡಿನ ದಾಳಿ ನಡೆಸಿತು. ಹಡಗಿನ ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿದಾಗ ಆ ದೋಣಿಯು ಸ್ವಲ್ಪ ದೂರದಲ್ಲಿದ್ದ ಮತ್ತೊಂದು ದೊಡ್ಡ ಹಡಗಿನತ್ತ ಮರಳಿತು. ಆ ಹಡಗು ತನ್ನ ಸ್ವಯಂಚಾಲಿತ ಗುರುತಿಸುವಿಕೆ ವ್ಯವಸ್ಥೆಯನ್ನು ಆಫ್ ಮಾಡಿತ್ತು. ಸರಕು ಸಾಗಣೆ ಹಡಗು ಮತ್ತು ಅದರಲ್ಲಿದ್ದ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News