×
Ad

ಕಾಂಗೋದಲ್ಲಿ ವಿದ್ಯಾರ್ಥಿಗಳಿದ್ದ ದೋಣಿ ಮುಳುಗಡೆ: ಕನಿಷ್ಠ 20 ಮಂದಿ ಮೃತ್ಯು

Update: 2026-07-05 22:36 IST

ಕಿನ್ಶಾಸಾ, ಜು.1: ರಾಜ್ಯ ಮಟ್ಟದ ಪರೀಕ್ಷೆಗಳನ್ನು ಮುಗಿಸಿದ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಮರದ ದೋಣಿಯೊಂದು ಮಧ್ಯ ಕಾಂಗೋದಲ್ಲಿ ಮುಳುಗಡೆಯಾಗಿದ್ದು, ಕನಿಷ್ಠ 20 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಸಾಯಿ ಪ್ರಾಂತದಲ್ಲಿ ದೋಣಿಯು ಸಂಕುರು ಮತ್ತು ಕಸಾಯಿ ನದಿಗಳು ಸಂಧಿಸುವ ಸ್ಥಳವನ್ನು ಪ್ರವೇಶಿಸುತ್ತಿದ್ದಾಗ ಮುಳುಗಿದೆ. 80 ಜನರು ಬದುಕುಳಿದಿದ್ದಾರೆ ಮತ್ತು 20 ಶವಗಳು ಪತ್ತೆಯಾಗಿವೆ ಎಂದು ಪ್ರಾಂತದ ಇಲೆಬೊ ಪ್ರದೇಶದ ಆಡಳಿತಾಧಿಕಾರಿ ತಿಳಿಸಿದ್ದಾರೆ. ಆದರೆ ದೋಣಿಯಲ್ಲಿ 200ಕ್ಕೂ ಹೆಚ್ಚು ಜನರಿದ್ದರು ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ `ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News