×
Ad

ಹಾರ್ಮುಝ್ ಸೇವಾ ಶುಲ್ಕ ಖಚಿತ : ಸ್ನೇಹಪರ ರಾಷ್ಟ್ರಗಳಿಗೆ `ವಿಶೇಷ' ಆದ್ಯತೆ ; ಇರಾನ್

Update: 2026-07-05 22:39 IST

Photo Credit : X

ಟೆಹರಾನ್, ಜು.5: ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಗೆ ಹೊಸ ಸೇವಾ ಶುಲ್ಕವನ್ನು ಪರಿಚಯಿಸಲು ಯೋಜಿಸಲಾಗಿದೆ. ಇತ್ತೀಚಿನ ಸಂಘರ್ಷದ ಸಮಯದಲ್ಲಿ ಇರಾನ್‍ಗೆ ಬೆಂಬಲ ನೀಡಿದ ದೇಶಗಳಿಗೆ `ವಿಶೇಷ" ಆದ್ಯತೆ ನೀಡುವುದಾಗಿ ಚೀನಾದಲ್ಲಿನ ಇರಾನ್ ರಾಯಭಾರಿ ಅಬ್ದುಲ್ರೆಜಾ ರಹಮಾನಿ ಫಾಜ್ಲಿ ತಿಳಿಸಿದ್ದಾರೆ.

ಹಾರ್ಮುಝ್ ಜಲಮಾರ್ಗದ ಸಂಚಾರವನ್ನು ನಿರ್ವಹಿಸಲು ಹೊಸ ವ್ಯವಸ್ಥೆಗಳ ಕುರಿತು ಒಮಾನ್ ದೇಶದೊಂದಿಗೆ ಇರಾನ್ ಕೆಲಸ ಮಾಡುತ್ತಿದೆ. ಹಾರ್ಮುಝ್ ನಮ್ಮ ಪ್ರಾದೇಶಿಕ ಜಲಪ್ರದೇಶದ ಭಾಗವಾಗಿರುವುದರಿಂದ ನಾವು ಖಂಡಿತವಾಗಿಯೂ ಸೇವಾ ಶುಲ್ಕವನ್ನು ವಿಧಿಸುತ್ತೇವೆ. ಆದರೆ ಈ ಶುಲ್ಕಗಳನ್ನು `ಟೋಲ್' ಎಂದು ಪರಿಗಣಿಸಬಾರದು.

ಪ್ರಸ್ತಾವಿತ ಕ್ರಮಗಳು ಜಲಮಾರ್ಗದ ಮೂಲಕ ಸುರಕ್ಷಿತ ಪ್ರಯಾಣವನ್ನು ಖಾತ್ರಿಪಡಿಸುವುದು, ಹಡಗುಗಳ ಚಲನವಲನಗಳನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಭಾರಿ ಕಡಲ ಸಂಚಾರದಿಂದ ಉಂಟಾಗುವ ಪರಿಸರದ ಮೇಲಿನ ಪರಿಣಾಮವನ್ನು ನಿರ್ವಹಿಸುವುದಕ್ಕೆ ಸಂಬಂಧಿಸಿದ ಸೇವೆಗಳನ್ನು ಒಳಗೊಂಡಿರುತ್ತವೆ. ಕಷ್ಟದ ಸಮಯದಲ್ಲಿ ನಮ್ಮೊಂದಿಗೆ ಸ್ನೇಹಪರವಾಗಿದ್ದ ಮತ್ತು ವಿಶೇಷವಾಗಿ ನಮ್ಮ ಪರವಾಗಿ ನಿಂತ ದೇಶಗಳಿಗೆ ನಾವು ಖಂಡಿತವಾಗಿಯೂ ವಿಶೇಷ ಆದ್ಯತೆಯನ್ನು ಪರಿಗಣಿಸುತ್ತೇವೆ' ಎಂದು ಫಾಜ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News