ಇಸ್ರೇಲ್ ಗಡಿ ಸಮೀಪ ಸ್ಫೋಟ : ಲೆಬನಾನ್‌ನ 6 ಯೋಧರು ಮೃತ್ಯು
Update: 2025-08-10 23:14 IST
PC - AFP
ಬೈರೂತ್, ಆ.10: ಇಸ್ರೇಲ್ ಗಡಿ ಸನಿಹದಲ್ಲಿರುವ ಶಸ್ತ್ರಾಸ್ತ್ರಗಳ ಡಿಪೋದಲ್ಲಿ ಸಂಭವಿಸಿದ ಸ್ಫೋಟದಲ್ಲಿ 6 ಯೋಧರು ಮೃತಪಟ್ಟಿರುವುದಾಗಿ ಲೆಬನಾನ್ ಸೇನೆ ಹೇಳಿದೆ.
ಸೈನ್ಯವು ಇಸ್ರೇಲ್ ಗಡಿಭಾಗದ ಬಳಿಯ ಟೈರ್ ಜಿಲ್ಲೆಯ ವಾಡಿ ಜಿಬ್ಕ್ವಿನ್ ಎಂಬಲ್ಲಿ ಹಿಜ್ಬುಲ್ಲಾದ ಸೌಲಭ್ಯವೊಂದರಿಂದ ಯುದ್ಧ ಸಾಮಾಗ್ರಿಗಳನ್ನು ಪರಿಶೀಲಿಸಿ ತೆರವುಗೊಳಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಸ್ಫೋಟದ ಕಾರಣ ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ ಎಂದು ಮಿಲಿಟರಿಯ ಮೂಲಗಳು ಹೇಳಿವೆ. ಕಳೆದ ವರ್ಷ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಯುದ್ಧವನ್ನು ಕೊನೆಗೊಳಿಸಿದ ಒಪ್ಪಂದದ ಪ್ರಕಾರ ದಕ್ಷಿಣ ಲೆಬನಾನ್‌ನಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾದ ಮೂಲಸೌಕರ್ಯಗಳನ್ನು ತೆರವುಗೊಳಿಸಲು ಲೆಬನಾನ್ ಸೇನೆಯನ್ನು ನಿಯೋಜಿಸಲಾಗಿದೆ.