ಬಿಎಲ್ಎ ಹೊಂಚು ದಾಳಿ : 7 ಪಾಕಿಸ್ತಾನಿ ಸೈನಿಕರು ಮೃತ್ಯು
ಸಾಂದರ್ಭಿಕ ಚಿತ್ರ | Photo Credit: AI
ಕ್ವೆಟಾ: ಬಲೂಚಿಸ್ತಾನದ ನೊಕ್-ಕುಂದಿ ಪ್ರದೇಶದಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳ ವಾಹನಗಳ ಮೇಲೆ ನಡೆದ ದಾಳಿಯಲ್ಲಿ ಏಳು ಪಾಕಿಸ್ತಾನಿ ಯೋಧರು ಮೃತಪಟ್ಟಿದ್ದಾರೆ. ಘಟನಾ ಸ್ಥಳದಿಂದ 5 ಮೃತದೇಹಗಳನ್ನು ತೆರವುಗೊಳಿಸಲಾಗಿದ್ದು, ಇನ್ನೆರಡು ಮೃತದೇಹಗಳನ್ನು ಭದ್ರತಾ ಆತಂಕಗಳಿಂದಾಗಿ ಮರುಪಡೆಯಲು ಸಾಧ್ಯವಾಗದೆ ಮರುಭೂಮಿಯಲ್ಲೇ ಬಿಡಲಾಗಿದೆ ಎಂದು ವರದಿಯಾಗಿದೆ.
ದಾಳಿಯ ನಂತರ ಪಾಕಿಸ್ತಾನಿ ಪಡೆಗಳು ಆ ಪ್ರದೇಶದಿಂದ ಹಿಂದೆ ಸರಿದಿವೆ ಮತ್ತು ಮತ್ತೊಂದು ದಾಳಿಯ ಬೆದರಿಕೆಯಿಂದಾಗಿ ಆಂಬ್ಯುಲೆನ್ಸ್ ಸಿಬ್ಬಂದಿ ಸ್ಥಳಕ್ಕೆ ತಲುಪಲು ಹಿಂಜರಿದರು ಎಂದು ಸ್ಥಳೀಯ ಮೂಲಗಳು ಹೇಳಿವೆ.
ಚಾಗೈ ಜಿಲ್ಲೆಯ ನೊಕ್-ಕುಂದಿ ಪ್ರದೇಶವು ಕಾರ್ಯತಾಂತ್ರಿಕವಾಗಿ ಪ್ರಮುಖವಾದ ಕ್ವೆಟ್ಟಾ-ತಫ್ತಾನ್ ಮಾರ್ಗದಲ್ಲಿದೆ ಹಾಗೂ ಇರಾನ್ ಮತ್ತು ಅಫ್ಘಾನಿಸ್ತಾನದೊಂದಿಗಿನ ಪಾಕಿಸ್ತಾನದ ಗಡಿಗಳಿಗೆ ಹತ್ತಿರದಲ್ಲಿದೆ.