ಡೊನಾಲ್ಡ್ ಟ್ರಂಪ್ | Photo Credit : PTI 

ವಾಶಿಂಗ್ಟನ್: ಶ್ವೇತಭವನಕ್ಕೆ ಪ್ರವೇಶವನ್ನು ನಿರಾಕರಿಸಿದ ಟ್ರಂಪ್ ಆಡಳಿತದ ವಿರುದ್ಧ ಮೊಕದ್ದಮೆ ಹೂಡುವುದಾಗಿ CNN, MS NOW ಮತ್ತು Politico ಮಾಧ್ಯಮ ಸಂಸ್ಥೆಗಳು ಸೋಮವಾರ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

`ನಮ್ಮ ಹಕ್ಕುಗಳನ್ನು ರಕ್ಷಿಸಲು ಮತ್ತು ಮಾಧ್ಯಮಗಳು ಏನನ್ನು ವರದಿ ಮಾಡಬೇಕು ಅಥವಾ ಪ್ರಕಟಿಸಬೇಕು ಎಂಬುದನ್ನು ಸರಕಾರ ನಿರ್ಧರಿಸುವುದಿಲ್ಲ ಎಂಬ ತತ್ವವನ್ನು ಎತ್ತಿಹಿಡಿಯಲು ನಾವು ಮೊಕದ್ದಮೆ ದಾಖಲಿಸುವುದಾಗಿ ಸರಕಾರಕ್ಕೆ ತಿಳಿಸಿದ್ದೇವೆ ಎಂದು ಜಂಟಿ ಹೇಳಿಕೆ ತಿಳಿಸಿದೆ.

`ಸುಳ್ಳು ಸುದ್ದಿ'ಯನ್ನು ಪ್ರಸಾರ ಮಾಡಿದ್ದಕ್ಕೆ ಶಿಕ್ಷೆಯಾಗಿ ಈ ಮಾಧ್ಯಮ ಸಂಸ್ಥೆಗಳನ್ನು ಅಧ್ಯಕ್ಷೀಯ ಭವನದಿಂದ ನಿಷೇಧಿಸುತ್ತಿರುವುದಾಗಿ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor