Photo Credit : X 

ನ್ಯೂಯಾರ್ಕ್: ಇರಾನ್ ಮೇಲಿನ ಒತ್ತಡವನ್ನು ಮುಂದುವರಿಸಲು ಟ್ರಂಪ್ ಆಡಳಿತವು ಯತ್ನಿಸುತ್ತಿದ್ದು, ಅಮೆರಿಕದ ನಿರ್ಬಂಧಗಳ ಬಿಸಿಯಿಂದಾಗಿ ಮುಂದಿನ ಎರಡು ದಿನಗಳಲ್ಲಿ ಇರಾನ್‍ನ ವಿಮಾನಯಾನ ಸಂಸ್ಥೆಗಳು ಜಾಗತಿಕವಾಗಿ ಕಾರ್ಯನಿರ್ವಹಿಸಲು ಸಂಕಷ್ಟ ಎದುರಿಸಲಿವೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಸೋಮವಾರ ಎಚ್ಚರಿಸಿದ್ದಾರೆ.

ಸೆಪ್ಟೆಂಬರ್ 23ರ ವೇಳೆಗೆ ಪ್ರಪಂಚದಾದ್ಯಂತ ಇರುವ ಎಲ್ಲಾ ಇರಾನಿಯನ್ ವಿಮಾನಯಾನ ಸಂಸ್ಥೆಗಳ ಸೇವೆಗಳು ಸ್ಥಗಿತಗೊಳ್ಳಲಿವೆ. ಇರಾನ್‍ನ ವಿಮಾನಗಳಿಗೆ ಸೇವೆ ಒದಗಿಸುವ ಅಂತರ್‍ರಾಷ್ಟ್ರೀಯ ಕೇಂದ್ರಗಳು ಅಮೆರಿಕನ್ ಬ್ಯಾಂಕಿಂಗ್ ವ್ಯವಸ್ಥೆಯಿಂದ, ಡಾಲರ್ ವ್ಯವಸ್ಥೆಯಿಂದ ಸಂಪೂರ್ಣವಾಗಿ ಹೊರಗುಳಿಯಬೇಕಾಗುತ್ತದೆ ಎಂದು ಬೆಸೆಂಟ್ ಸಿಎನ್‍ಬಿಸಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor