Photo Credit : AP 

ಟೆಹರಾನ್: ಅಮೆರಿಕವು ಇರಾನ್ ವಿರುದ್ಧ ಮತ್ತೆ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದರೆ, ಇರಾನ್ ಹೊಸ ಶಸ್ತ್ರಾಸ್ತ್ರಗಳನ್ನು ಬಳಸಲಿದೆ ಮತ್ತು ಪ್ರಾಂತದಲ್ಲಿರುವ ಅಮೆರಿಕದ ನೆಲೆಗಳನ್ನು ಗುರಿಯಾಗಿಸಲಿದೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾಪ್ರ್ಸ್ (ಐಆರ್‍ಜಿಸಿ) ಎಚ್ಚರಿಸಿದೆ.

ʼಮತ್ತೊಮ್ಮೆ ಅಮೆರಿಕ ದಾಳಿ ನಡೆಸಿದರೆ ಇರಾನ್‍ನ ರಕ್ಷಣಾತ್ಮಕ ಮತ್ತು ಪ್ರತಿದಾಳಿಯ ಕಾರ್ಯಾಚರಣೆಗಳಲ್ಲಿ ಗಣನೀಯ ಬದಲಾವಣೆಗಳು ಇರುತ್ತವೆ. ಆ ಬದಲಾವಣೆಗಳಲ್ಲಿ ಯುದ್ಧದ ಭೌಗೋಳಿಕತೆ ಮತ್ತು ಬಳಸುವ ಶಸ್ತ್ರಾಸ್ತ್ರಗಳು ಹಾಗೂ ಮಿಲಿಟರಿ ಉಪಕರಣಗಳ ಬದಲಾವಣೆಯೂ ಸೇರಿದೆ. ನಾವು ಯುದ್ಧಭೂಮಿಗೆ ಹೊಸ ಸಾಮರ್ಥ್ಯಗಳಿರುವ ಹೊಸ ಶಸ್ತ್ರಾಸ್ತ್ರಗಳನ್ನು ತರಲಿದ್ದೇವೆ ಮತ್ತು ಅದನ್ನು ನೋಡಿ ಪ್ರಪಂಚವೇ ಆಶ್ಚರ್ಯಪಡಲಿದೆ' ಎಂದು ಎಂದು ಐಆರ್‌ಜಿಸಿ ವಕ್ತಾರ ಹೊಸೈನ್ ಮೊಹೆಬ್ಬಿ ತಿಳಿಸಿದ್ದಾರೆ.

ʼನಮ್ಮ ಗುರಿಗಳು ಇನ್ನು ಮುಂದೆ ಹಿಂದಿನಂತೆಯೇ ಇರುವುದಿಲ್ಲ. ನಾವು ಇದುವರೆಗೆ ದಾಳಿ ಮಾಡದ ಹೊಸ ಗುರಿಗಳನ್ನು ಹೊಂದಿದ್ದೇವೆ' ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor