ಇರಾನ್‌ನಲ್ಲಿನ 90 ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ: ಅಮೆರಿಕ
Photo: screengrab/ x.com/ANI
ವಾಷಿಂಗ್ಟನ್/ಟೆಹ್ರಾನ್: ಹಾರ್ಮುಝ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರ ಹಾಗೂ ವಾಣಿಜ್ಯ ಹಡಗುಗಳ ಸಿಬ್ಬಂದಿಗಳ ಮೇಲೆ ದಾಳಿ ನಡೆಸುವ ಇರಾನ್‌ನ ಸಾಮರ್ಥ್ಯವನ್ನು ಕುಗ್ಗಿಸುವ ಉದ್ದೇಶದಿಂದ ತನ್ನ ಪಡೆಗಳು ಇರಾನ್ ವಿರುದ್ಧ ಮತ್ತೊಂದು ಸುತ್ತಿನ ದಾಳಿಗಳನ್ನು ಪೂರ್ಣಗೊಳಿಸಿವೆ ಎಂದು ಅಮೆರಿಕದ ಕೇಂದ್ರ ಕಮಾಂಡ್ (CENTCOM) ತಿಳಿಸಿದೆ.
CENTCOM ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಅಮೆರಿಕ ಪಡೆಗಳು ಇರಾನ್‌ನ ಸುಮಾರು 90 ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿವೆ. ವಾಯು ರಕ್ಷಣಾ ವ್ಯವಸ್ಥೆಗಳು, ಕರಾವಳಿ ಕಣ್ಗಾವಲು ವ್ಯವಸ್ಥೆಗಳು, ಕ್ಷಿಪಣಿ ಹಾಗೂ ಡ್ರೋನ್ ಸಂಗ್ರಹಣಾ ತಾಣಗಳು, ನೌಕಾಪಡೆಯ ಸಾಮರ್ಥ್ಯಗಳಿಗೆ ಸಂಬಂಧಿಸಿದ ಸೌಲಭ್ಯಗಳು ಮತ್ತು ಇರಾನ್‌ನ ಕರಾವಳಿಯುದ್ದಕ್ಕೂ ಇರುವ ಮಿಲಿಟರಿ ಲಾಜಿಸ್ಟಿಕ್ಸ್ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಹೇಳಿದೆ.
ಇತ್ತೀಚಿನ ದಾಳಿಗಳು ಹಿಂದಿನ ರಾತ್ರಿ ಇರಾನ್‌ನಲ್ಲಿ ಯಶಸ್ವಿಯಾಗಿ ನಡೆಸಲಾದ ಆಕ್ರಮಣಕಾರಿ ಕಾರ್ಯಾಚರಣೆಗಳ ಮುಂದುವರಿದ ಭಾಗವಾಗಿವೆ ಎಂದು CENTCOM ತಿಳಿಸಿದೆ.
ಇದಕ್ಕೂ ಒಂದು ದಿನ ಮೊದಲು ಇರಾನ್‌ನ 80ಕ್ಕೂ ಹೆಚ್ಚು ಗುರಿಗಳ ಮೇಲೆ ಅಮೆರಿಕ ಪಡೆಗಳು ದಾಳಿ ನಡೆಸಿರುವುದಾಗಿ CENTCOM ಹೇಳಿಕೊಂಡಿತ್ತು. ಅದರ ಬೆನ್ನಲ್ಲೇ ಇದೀಗ ಸುಮಾರು 90 ಮಿಲಿಟರಿ ಗುರಿಗಳ ಮೇಲೆ ಮತ್ತೊಂದು ಸುತ್ತಿನ ದಾಳಿ ನಡೆಸಿರುವುದಾಗಿ ತಿಳಿಸಿದೆ.
ಈ ದಾಳಿಗಳಿಂದ ಉಂಟಾದ ಹಾನಿಯ ಪ್ರಮಾಣ ಅಥವಾ ಸಂಭವನೀಯ ಸಾವುನೋವುಗಳ ಕುರಿತು CENTCOM ಯಾವುದೇ ಮಾಹಿತಿ ನೀಡಿಲ್ಲ. ಈ ಬೆಳವಣಿಗೆಯ ಬಗ್ಗೆ ಇರಾನ್‌ನಿಂದಲೂ ತಕ್ಷಣ ಯಾವುದೇ ಅಧಿಕೃತ ಪ್ರತಿಕ್ರಿಯೆ ಪ್ರಕಟವಾಗಿಲ್ಲ ಎಂದು Al Jazeera ವರದಿ ಮಾಡಿದೆ.
#WATCH | U.S. Central Command releases a video that shows U.S. military strikes on Iranian military targets
— ANI (@ANI) July 9, 2026
The official account of U.S. Central Command tweets, "U.S. Central Command (CENTCOM) forces completed an additional round of strikes against Iran, July 8, to further… pic.twitter.com/9X3xChlCjz