ಕುವೈತ್, ಬಹ್ರೇನ್‌ನಲ್ಲಿನ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ, ಡ್ರೋನ್ ದಾಳಿ: IRGC ಹೇಳಿಕೆ
Photo: x.com/FlashWireNews
ಟೆಹ್ರಾನ್: ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಗುರುವಾರ ಹೇಳಿಕೊಂಡಿದೆ.
ಅಮೆರಿಕ ಇತ್ತೀಚೆಗೆ ಇರಾನ್ ಮೇಲೆ ನಡೆಸಿದ ದಾಳಿಗಳಿಗೆ ಪ್ರತಿಯಾಗಿ, ಮೊದಲ ಹಂತದ ಭಾಗವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಐಆರ್‌ಜಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ ಐಆರ್‌ಐಬಿ ಪ್ರಸಾರ ಮಾಡಿದ ಹೇಳಿಕೆಯ ಪ್ರಕಾರ, ಅಮೆರಿಕದ ದಾಳಿಯ ಕೆಲವೇ ಗಂಟೆಗಳ ಬಳಿಕ ಐಆರ್‌ಜಿಸಿಯ ನೌಕಾಪಡೆ ಮತ್ತು ಏರೋಸ್ಪೇಸ್ ಪಡೆಗಳು ಜಂಟಿಯಾಗಿ ಕ್ಷಿಪಣಿ ಹಾಗೂ ಡ್ರೋನ್ ಕಾರ್ಯಾಚರಣೆ ಕೈಗೊಂಡಿವೆ.
ಈ ಕಾರ್ಯಾಚರಣೆಯಲ್ಲಿ ಕುವೈತ್‌ನ ಕ್ಯಾಂಪ್ ಅರಿಫ್ಜಾನ್ ಸೇನಾ ನೆಲೆ ಮತ್ತು ಅಲಿ ಅಲ್ ಸಲೇಮ್ ವಾಯುನೆಲೆ, ಬಹ್ರೇನ್‌ನ ಜುಫೈರ್ ನೌಕಾನೆಲೆ ಹಾಗೂ ಶೇಖ್ ಈಸಾ ವಾಯುನೆಲೆಯನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ ಎಂದು Al Jazeera ವರದಿ ಮಾಡಿದೆ.