ಇರಾಕ್ ನ ನಜಾಫ್ ನಿಂದ ಇರಾನ್ ನ ಮಶಾದ್ ಗೆ ಆಯತೊಲ್ಲಾ ಅಲಿ ಖಾಮಿನೈ ಅವರ ಮೃತದೇಹ ರವಾನೆ
Photo credit: PTI
ತೆಹ್ರಾನ್: ದಿವಂಗತ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಅವರ ಮೃತದೇಹವಿರುವ ಪೆಟ್ಟಿಗೆಯನ್ನು ದಫನ ಮಾಡುವ ಮುನ್ನ ಗುರುವಾರ ಇರಾಕ್ ನ ನಜಾಫ್ ನಿಂದ ಇರಾನ್ ನ ಮಶಾದ್ ಗೆ ಸಾಗಿಸಲಾಗುತ್ತಿದೆ ಎಂದು ಮೆಹರ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇರಾನ್ ಮತ್ತು ಇರಾಕ್ ನ ಪವಿತ್ರ ನಗರಗಳಾದ ನಜಾಫ್ ಹಾಗೂ ಕರ್ಬಲಾ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಳೆದ ಆರು ದಿನಗಳಿಂದ ನಡೆಯುತ್ತಿರುವ ಅಂತ್ಯಕ್ರಿಯೆ ಕಾರ್ಯಕ್ರಮಗಳ ಅಂತಿಮ ಹಂತವಾಗಿ ಈ ಮೃತದೇಹವಿರುವ ಪೆಟ್ಟಿಗೆಯನ್ನು ಮಶಾದ್ ಗೆ ಕೊಂಡೊಯ್ಯಲಾಗುತ್ತಿದೆ.
ಖಾಮಿನೈ ಅವರ ಕಚೇರಿಯ ಮುಖ್ಯಸ್ಥ ಮೊಹಮ್ಮದ್ ಮೊಹಮ್ಮದಿ ಗೋಲ್ಪಾಯೆಗಾನಿ ಅವರ ಪ್ರಕಾರ, ಖಾಮಿನೈ ಅವರನ್ನು ಮಶಾದ್ ನಲ್ಲಿರುವ ಇಮಾಮ್ ರೆಜಾ ದರ್ಗಾದ ಸಮೀಪದಲ್ಲಿ ದಫನ ಮಾಡಬೇಕೆಂದು ಅವರು ಜೀವಿತಾವಧಿಯಲ್ಲೇ ಇಚ್ಛೆ ವ್ಯಕ್ತಪಡಿಸಿದ್ದರು.
ಅದರಂತೆ, ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಅವರ ಮೃತದೇಹವಿರುವ ಪೆಟ್ಟಿಗೆಯನ್ನು ನಜಾಫ್‌ನಿಂದ ಮಶಾದ್‌ಗೆ ಸಾಗಿಸಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.