×
Ad

ಆಯತುಲ್ಲಾ ಅಲಿ ಖಾಮಿನೈ ಅಂತ್ಯಕ್ರಿಯೆ | ಟೆಹ್ರಾನ್‌ಗೆ ಪಾರ್ಥಿವ ಶರೀರ ರವಾನೆ; ಅಂತ್ಯಕ್ರಿಯೆಯಲ್ಲಿ 2 ಕೋಟಿ ಜನರು ಭಾಗವಹಿಸುವ ನಿರೀಕ್ಷೆ

Update: 2026-07-03 12:00 IST

ಆಯತುಲ್ಲಾ ಅಲಿ ಖಾಮಿನೈ (File Photo: PTI)

ಟೆಹ್ರಾನ್ : ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಪಾರ್ಥಿವ ಶರೀರವನ್ನು ಟೆಹ್ರಾನ್‌ನ ಗ್ರ್ಯಾಂಡ್ ಮೊಸಲ್ಲಾ ಮಸೀದಿಗೆ ತರಲಾಗಿದೆ ಎಂದು aljazeera.com ವರದಿ ಮಾಡಿದೆ.

36 ವರ್ಷಗಳಿಗೂ ಹೆಚ್ಚು ಕಾಲ ಇರಾನ್‌ ದೇಶವನ್ನು ಮುನ್ನಡೆಸಿದ್ದ ಅಲಿ ಖಾಮಿನೈ ಅವರ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಯಲ್ಲಿ ಸುಮಾರು 2 ಕೋಟಿ ಜನರು ಭಾಗವಹಿಸುವ ನಿರೀಕ್ಷೆಯಿದೆ. ಇದು ಇರಾನ್ ಇತಿಹಾಸದಲ್ಲೇ ಅತಿದೊಡ್ಡ ಅಂತ್ಯಕ್ರಿಯೆ ಕಾರ್ಯಕ್ರಮವಾಗುವ ಸಾಧ್ಯತೆಯಿದೆ.

ಅಂತ್ಯಕ್ರಿಯೆಯ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ, ಆಲಿ ಖಾಮಿನೈ ತವರೂರಾದ ಮಶಾದ್‌ನಲ್ಲಿರುವ ಇಮಾಮ್ ಮಸೀದಿಯ ಬಳಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ವರದಿಯಾಗಿದೆ.

ಅಮೆರಿಕ-ಇಸ್ರೇಲ್‌ ದಾಳಿಯಲ್ಲಿ ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಆಲಿ ಖಾಮಿನೈ ಮತ್ತು ಕುಟುಂಬದ ಸದಸ್ಯರು ಮೃತಪಟ್ಟಿದ್ದರು. ಖಾಮಿನೈ ಅವರ ನಿಧನದ ನಂತರ ಹಲವು ಬಾರಿ ಅಂತ್ಯಕ್ರಿಯೆಯ ದಿನಾಂಕವನ್ನು ಬದಲಾಯಿಸಲಾಗಿತ್ತು. ಬಳಿಕ, ಜೂನ್‌ನಲ್ಲಿ ಇರಾನ್ ಅಧಿಕಾರಿಗಳು ಅಂತ್ಯಕ್ರಿಯೆ ಮತ್ತು ಅಂತಿಮ ವಿಧಿವಿಧಾನಗಳ ವೇಳಾಪಟ್ಟಿಯನ್ನು ಪ್ರಕಟಿಸಿದ್ದರು.

ಇರಾನ್‌ನ ಸರಕಾರಿ ಮಾಧ್ಯಮಗಳ ವರದಿ ಪ್ರಕಾರ, ಜುಲೈ 4ರಿಂದ ಟೆಹ್ರಾನ್‌ನಲ್ಲಿ ಅಂತ್ಯಕ್ರಿಯೆ ಕಾರ್ಯಕ್ರಮಗಳು ಆರಂಭವಾಗಲಿವೆ. ಬಳಿಕ ಕೋಮ್ ಮತ್ತು ಮಶಾದ್ ನಗರಗಳಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿದ್ದು, ಜುಲೈ 9ರಂದು ಮಶಾದ್ ನ ಇಮಾಮ್ ರೆಝಾದಲ್ಲಿ ಖಾಮಿನೈ ಅವರ ಧಪನ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News