ಸಾಂದರ್ಭಿಕ ಚಿತ್ರ  (Photo: AI Generated)

ಹೊಸದಿಲ್ಲಿ: ಅಮೆಝಾನ್ ಜಾಗತಿಕವಾಗಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತವನ್ನು ನಡೆಸಿದೆ. ಈ ಬಾರಿ ಕಂಪೆನಿಯು ಸರಿಸುಮಾರು 1,000 ಉದ್ಯೋಗಗಳನ್ನು ಕಡಿತಗೊಳಿಸಿದ್ದು, ಅಮೆರಿಕ, ಭಾರತ ಮತ್ತು ಬ್ರಿಟನ್ ಸೇರಿದಂತೆ ಹಲವು ದೇಶಗಳಲ್ಲಿನ ಕಂಪೆನಿಯ ರಿಟೇಲ್ ವಿಭಾಗದ ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ.

ಈ ಉದ್ಯೋಗ ಕಡಿತವು ಅಮೆಝಾನ್‌ನ ವ್ಯಾಪಕ ಉದ್ಯೋಗ ಕಡಿತ ಪ್ರಕ್ರಿಯೆಯ ಭಾಗವಾಗಿದ್ದು, ಇದು ಜಾಗತಿಕವಾಗಿ ಸುಮಾರು 30,000 ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ.

Reuters ಮತ್ತು Business Insider ವರದಿಗಳ ಪ್ರಕಾರ, ಅಮೆಝಾನ್‌ನ ಇ-ಕಾಮರ್ಸ್ ವೆಬ್‌ಸೈಟ್‌ನ ನಿರ್ವಹಣೆ ನೋಡಿಕೊಳ್ಳುವ 'ಸ್ಟೋರ್ಸ್' ವಿಭಾಗದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಸ್ಟೋರ್ಸ್ ವಿಭಾಗವು ಅಮೆಝಾನ್‌ನ ಇ-ಕಾಮರ್ಸ್ ವೆಬ್‌ಸೈಟ್‌ ಅನ್ನು ನಿರ್ವಹಿಸುತ್ತದೆ.

“ನಮ್ಮ ಆದ್ಯತೆಗಳನ್ನು ಈಡೇರಿಸಲು ಈ ಕ್ರಮವು ಸಹಕಾರಿಯಾಗಲಿದೆ ಎಂದು ನಾವು ಭಾವಿಸುತ್ತೇವೆ. ಸ್ಟೋರ್ಸ್ ವ್ಯವಹಾರದ ಕೆಲವು ಭಾಗಗಳಲ್ಲಿ ಬದಲಾವಣೆ ಮಾಡಿದ್ದೇವೆ" ಎಂದು ಅಮೆಝಾನ್ ವಕ್ತಾರರು Reutersಗೆ ತಿಳಿಸಿದ್ದಾರೆ. ಆದರೆ, ಉದ್ಯೋಗ ಕಡಿತದಿಂದ ನಿಖರವಾಗಿ ಎಷ್ಟು ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ ಎಂಬುದನ್ನು ಕಂಪೆನಿಯು ಬಹಿರಂಗಪಡಿಸಿಲ್ಲ.

ಅಮೆಝಾನ್ ಉದ್ಯೋಗಿಗಳಿಗೆ ಇಮೇಲ್ ಮೂಲಕ ವಜಾಗೊಳಿಸಿರುವ ಬಗ್ಗೆ ಮಾಹಿತಿ ನೀಡಿದೆ. ಈ ಮೊದಲು ಒರಾಕಲ್ ಮತ್ತು ಮೆಟಾ ಕಂಪೆನಿಗಳಲ್ಲಿಯೂ ಇದೇ ರೀತಿಯಲ್ಲಿ ಉದ್ಯೋಗಿಗಳಿಗೆ ಇಮೇಲ್ ಮೂಲಕ ಉದ್ಯೋಗ ಕಡಿತದ ಮಾಹಿತಿ ನೀಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor