ಶ್ರೀಲಂಕಾದ ಮಾಜಿ ಅಧ್ಯಕ್ಷರ ಪುತ್ರನ ಬಂಧನ
Photo Credit : AP
ಕೊಲಂಬೊ: ಶ್ರೀಲಂಕಾದ ಪ್ರಮುಖ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯು 2013ರ ಏರ್‍ಬಸ್ ವಿಮಾನ ಖರೀದಿ ಪ್ರಕರಣದ ಭ್ರಷ್ಟಾಚಾರ ತನಿಖೆಗೆ ಸಂಬಂಧಿಸಿದಂತೆ ಸಂಸದ ನಮಲ್ ರಾಜಪಕ್ಸೆ ಅವರನ್ನು ಶುಕ್ರವಾರ ಬಂಧಿಸಿದೆ. ನಮಲ್ ಅವರು ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರ ಪುತ್ರರಾಗಿದ್ದಾರೆ.
ವಿವಾದಾಸ್ಪದ ಸುಮಾರು 2.3 ಶತಕೋಟಿ ಡಾಲರ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಈ ಬಂಧನವಾಗಿದೆ ಎಂದು ಅವರ ಪರ ವಕೀಲರು ಖಚಿತಪಡಿಸಿದ್ದಾರೆ. ಈ ಒಪ್ಪಂದವನ್ನು 2016ರಲ್ಲಿ ಅಧಿಕಾರಕ್ಕೆ ಬಂದ ಹೊಸ ಸರಕಾರವು ರದ್ದುಗೊಳಿಸಿತ್ತು.