ಬ್ರಿಟನ್ | ಮೋಹನ್ ಭಾಗವತ್ ಕಾರ್ಯಕ್ರಮಕ್ಕೆ ಸಂಘಟನೆಗಳ ವಿರೋಧ
ಮೋಹನ್ ಭಾಗವತ್ | Photo Credit : PTI
ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರ ಬ್ರಿಟನ್ ಭೇಟಿಯ ಸಮಯದಲ್ಲಿ ಆರೆಸ್ಸೆಸ್ ಆಯೋಜಿಸುವ ಕಾರ್ಯಕ್ರಮಗಳನ್ನು ಗ್ರೇಟರ್ ಲಂಡನ್ ಅಥಾರಿಟಿ ಬಹಿಷ್ಕರಿಸಬೇಕೆಂದು ಬ್ರಿಟನ್ ಮೂಲದ ಇಪ್ಪತ್ತು ನಾಗರಿಕ ಸಮಾಜ ಸಂಘಟನೆಗಳು ಲಂಡನ್ ಮೇಯರ್ ಸಾದಿಕ್ ಖಾನ್ ಅವರಿಗೆ ಮನವಿ ಮಾಡಿವೆ.
ಭಾಗವತ್ ಅವರು ವಾರಾಂತ್ಯದಲ್ಲಿ ಬ್ರಿಟನ್‍ನಲ್ಲಿರುವ ಭಾರತೀಯ ಮೂಲದವರನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.
ಆರೆಸ್ಸೆಸ್ ಅನ್ನು `ಯುರೋಪಿಯನ್ ಫ್ಯಾಸಿಸಂನಿಂದ ಸ್ಪಷ್ಟ ಪ್ರೇರಣೆ ಪಡೆದ ಸರ್ವಾಧಿಕಾರಿ ಮತ್ತು ಮಿಲಿಟರಿ ಮಾದರಿಯ ಗುಂಪು' ಎಂದು ಬಣ್ಣಿಸಿರುವ ಈ ಸಂಘಟನೆಗಳು, ಬ್ರಿಟನ್‍ನ ಬಹುಸಂಸ್ಕೃತಿಯ ಸಮಾಜವನ್ನು ರಕ್ಷಿಸುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿವೆ.