ಕೆಂಪು ಸಮುದ್ರದಲ್ಲಿ ಭಾರತೀಯರಿದ್ದ ದೋಣಿಯ ಮೇಲೆ ದಾಳಿ: ವರದಿ
Photo Credit : indiatoday.in
ಸನಾ, ಅ. 22: ಕೆಂಪು ಸಮುದ್ರದಲ್ಲಿರುವ ಜುಫಾರ್ ದ್ವೀಪದ ಬಳಿ 14 ಭಾರತೀಯ ಪ್ರಜೆಗಳಿದ್ದ ದೋಣಿಯನ್ನು ಸೌದಿ ಅರೇಬಿಯ ಗುರಿಯಾಗಿಸಿದೆ ಎಂದು ಯಮನ್ ನ ಹೌತಿ ಬಂಡುಕೋರರು ಗುರುವಾರ ಆರೋಪಿಸಿದ್ದಾರೆ. ದೋಣಿಯಲ್ಲಿದ್ದವರ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೌತಿಗಳ ಸಶಸ್ತ್ರ ಪಡೆಗಳು ಪ್ರಯಾಣಿಕರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿವೆ. ಈ ಘಟನೆಯು ಕೆಂಪು ಸಮುದ್ರದಲ್ಲಿ ಅಂತರರಾಷ್ಟ್ರೀಯ ಸಂಚಾರಕ್ಕೆ ಬೆದರಿಕೆಯಾಗಿದೆ ಎಂದು ಹೌತಿಗಳ ಸ್ವಾಮ್ಯದ ‘ಸಬಾ’ ಸುದ್ದಿ ಸಂಸ್ಥೆ ವರದಿ ಮಾಡಿದೆ.