ನರೇಂದ್ರ ಮೋದಿ , ಸ್ಮಿತ್ ಮಚ್ಚರ್ , ಬೆಂಜಮಿನ್ ನೆತನ್ಯಾಹು | Photo Credit : PTI 

ಟೆಲ್ ಅವೀವ್, ಅ. 22: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಗುರುವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಇಸ್ರೇಲ್‌ ನ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದಾರೆ.

ಕಳೆದ ಸೆಪ್ಟೆಂಬರ್‌ ನಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ವಿಮಾನ ದುರಂತವನ್ನು ತಪ್ಪಿಸಿದ ಫ್ಲೈದುಬೈ ವಿಮಾನದ ಪೈಲಟ್ ಸ್ಮಿತ್ ಮಚ್ಚರ್ ಅವರೊಂದಿಗೆ ಪ್ರಧಾನಿ ಮೋದಿ ಅವರೂ ಕಾರ್ಯಕ್ರಮದ ಸಂದರ್ಭದಲ್ಲಿ ದೀವಟಿಗೆ ಬೆಳಗಬೇಕು ಎಂದು ನೆತನ್ಯಾಹು ಕೋರಿದ್ದಾರೆ.

ಇಸ್ರೇಲ್ ಪ್ರತಿವರ್ಷ ಮೇ 14ರಂದು ತನ್ನ ರಾಷ್ಟ್ರೀಯ ದಿನವನ್ನು ಆಚರಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor